Naga Chaitanyaಗೆ ಶೋಭಿತಾ ಪೋಷಕರು ಕೊಟ್ಟ ಗಿಫ್ಟ್ ಏನು ಗೊತ್ತಾ?

naga chaitanya
Published on

ಹೈದ್ರಾಬಾದ್​​:  ಟಾಲಿವುಡ್ ಹೀರೋ ಅಕ್ಕಿನೇನಿ ನಾಗಾರ್ಜುನ ಅವರ ಮಗ ನಾಗಚೈತನ್ಯ ( Naga Chaitanya ) ಅವರು ಶೋಭಿತಾ ಧೂಳಿಪಾಲ ಅವರನ್ನು ಮದ್ವೆ ಆಗುತ್ತಿದ್ದಾರೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಈಗಾಗಲೇ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿರುವ ಅಕ್ಕಿನೇನಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಅವರ ಮದುವೆ ಇದೇ ಡಿಸೆಂಬರ್ 4 ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ವರದಿಯಾಗಿದೆ.

ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಈ ಮದುವೆ ಸಮಾರಂಭ ನಡೆಯಲಿದೆಯಂತೆ. ಅದ್ಧೂರಿ ಮದುವೆಗೆ ವೇದಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಪ್ರಮುಖ ನಿರ್ದೇಶಕರಿಗೆ ವಹಿಸಲಾಗಿದೆ. ನಾಗ ಚೈತನ್ಯ-ಶೋಭಿತಾಳ ಮದುವೆಯಲ್ಲಿ ಚಿತ್ರರಂಗದ ಹಾಗೂ ರಾಜಕೀಯ ಗಣ್ಯರ ಕುಟುಂಬದವರು, ಸ್ನೇಹಿತರು ಹಾಗೂ ಆಪ್ತರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ನಾಗ ಚೈತನ್ಯ-ಶೋಭಿತಾಳ ಮದುವೆಗೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಸುದ್ದಿಯಿದೆ.

ಶೋಭಿತಾ ಪೋಷಕರು ತಮ್ಮ ಭಾವಿ ಅಳಿಯನಿಗೆ ಭಾರೀ ವರದಕ್ಷಿಣೆ ನೀಡಲಿದ್ದಾರೆ ಎಂಬ ಮಾತು ಟಾಲಿವುಡ್ ನಲ್ಲಿ ನಡೆದಿದೆ. ನಾಗ ಚೈತನ್ಯ ಬಳಿ ಸಾಕಷ್ಟು ರೇಸಿಂಗ್ ಕಾರುಗಳಿವೆ. ಆಡಿ ಕಾರು ಹಾಗೂ ಸ್ಪೋರ್ಟ್ಸ್ ಬೈಕ್​ ಜತೆಗೆ ಹೈದರಾಬಾದ್ ನಲ್ಲೇ ಐಷಾರಾಮಿ ವಿಲ್ಲಾ  ನೀಡಲಿದ್ದಾರೆ ಎಂದು ವರದಿಯಾಗಿದೆ.

Naga Chaitanya, Sobhita Dhulipala

ಅಕ್ಕಿನೇನಿ ಕುಟುಂಬವು ಶೋಭಿತಾ ಮತ್ತು ಅವರ ಕುಟುಂಬ ಸದಸ್ಯರಿಗೆ ಯಾವುದೇ ಹಣ ಮತ್ತು ಆಭರಣದ ಅಗತ್ಯವಿಲ್ಲ ಮತ್ತು ತಮ್ಮ ಮಗ  ಒಳ್ಳೆಯ ಮನೆ ಸಂಗಾತಿಯೊಂದಿಗೆ ಸಂತೃಪ್ತನಾಗಿರುತ್ತಾನೆ ಎಂದು ಹೇಳಿದ್ದರು ಎಂದು ವರದಿಯಾಗಿದೆ. ಇದು ಎಷ್ಟರಮಟ್ಟಿಗೆ ಸತ್ಯ ಎಂಬುದು ತಿಳಿಯಬೇಕಾದರೆ ಮದುವೆ ಆಗುವವರೆಗೂ ಕಾಯಲೇಬೇಕು.

ನಿಶ್ಚಿತಾರ್ಥದ ನಂತರ ಚೈತನ್ಯ ಮತ್ತು ಶೋಭಿತಾ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚಿಗೆ ನಡೆದ ಅಣ್ಣಾರ್ ಶತಮಾನೋತ್ಸವ ಸಮಾರಂಭದಲ್ಲಿ ಸೋಭಿತಾ ಕೂಡ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net