ಇಸ್ಲಾಮಾಬಾದ್: ಪ್ಯಾರಿಸ್ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ತಾರೆ ಅರ್ಷದ್ ನದೀಂ ತವರೂರು ಪಾಕಿಸ್ತಾನದಲ್ಲಿ ಒಟ್ಟು 7.52 ಕೋಟಿ ರೂಪಾಯಿ (25 ಕೋಟಿ ರೂ. ಪಾಕಿಸ್ತಾನಿ ರೂಪಾಯಿ) ಬಹುಮಾನ ಮೊತ್ತ ಪಡೆದಿದ್ದಾರೆ.
ಪಾಕ್ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಶರೀಫ್ ಮಂಗಳವಾರವಷ್ಟೇ ನದೀಂಗೆ 3.01 ಕೋಟಿ ರೂ. (10 ಕೋಟಿ ಪಾಕಿಸ್ತಾನಿ ರೂ.) ನೀಡಿದ್ದರೆ, ಬುಧವಾರ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ 4.51 ಕೋಟಿ ರೂ. (15 ಕೋಟಿ ಪಾಕಿಸ್ತಾನಿ ರೂ.) ಬಹುಮಾನ ಮೊತ್ತ ನೀಡಿ ಗೌರವಿಸಿದರು.
ಮುಂದೊಂದು ದಿನ ವಿಶ್ವದಾಖಲೆ ಮುರಿಯುವುದು ನನ್ನ ಗುರಿ ಎಂದು 27 ವರ್ಷದ ಅರ್ಷದ್ ನದೀಂ ಇದೇ ವೇಳೆ ಹೇಳಿದ್ದಾರೆ. ಜೆಕ್ ಗಣರಾಜ್ಯದ ಜಾನ್ ಝೆಲೆಜ್ನಿ 1996ರಲ್ಲಿ 98.48 ಮೀ. ದೂರ ಜಾವೆಲಿನ್ ಎಸೆದಿರುವುದು ವಿಶ್ವದಾಖಲೆಯಾಗಿದೆ.