KGF ಮ್ಯೂಸಿಕ್ ಡೈರೆಕ್ಟರ್ 'ರವಿ ಬಸ್ರೂರ್​ ' ನಿಜವಾದ ಹೆಸರೇನು ಗೊತ್ತಾ?; ಇನ್ನೊಬ್ಬರ ಐಡೆಂಟಿನೆ ಇವರ ಹೆಸರು..!

Ravi Basrur
Published on

-ಜೀವನವೇ ಸಾಕು ಎಂದು ನಿರ್ಧರಿಸಿದ್ದ ಬಸ್ರೂರ್ ಬಾಳಿಗೆ ಬೆಳಕಾಗಿದ್ದು ಆ 'ರವಿ'

ಬೆಂಗಳೂರು: ಸ್ಯಾಂಡಲ್​ವುಡ್​​ನ​ ಬಹುಬೇಡಿಕೆ ಸಂಗೀತ ನಿರ್ದೇಶಕ,ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್​ ಕೂಡಾ ಒಬ್ಬರಾಗಿದ್ದಾರೆ. ರವಿ ಬಸ್ರೂರ್​ ಅವರ ಮ್ಯೂಸಿಕ್​ ಇದೆ ಎಂದರೆ ಆ ಸಿನಿಮಾ, ಸಾಂಗ್​​ ಹಿಟ್​​ ಎನ್ನುವಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಮ್ಯೂಸಿಕ್ ಇಂಡಸ್ಟ್ರಿಗೆ ಎಂಟ್ರಿ ಕೊಡಲು​ ತನಗೆ ಸಹಾಯ ಮಾಡಿದ ವ್ಯಕ್ತಿಯ ಹೆಸರನ್ನು ತನ್ನ ಹೆಸರನ್ನಾಗಿಟ್ಟುಕೊಂಡು, ಆ ಹೆಸರಿಗೆ ಕಿಂಚಿತ್ತು ಧಕ್ಕೆ ಬರದಂತೆ ನಡೆದುಕೊಂಡು ಸಾಧನೆ ತೋರಿದ್ದಾರೆ ರವಿ ಬಸ್ರೂರ್​.. ಹಾಗಿದ್ರೆ ಬಸ್ರೂರ್​ ಅವರ ನಿಜವಾದ ಹೆಸರು ಏನು ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ರವಿ ಬಸ್ರೂರು ಮಾತನಾಡಿ, " ಜೀವನವೇ ಸಾಕೆಂದು ವೆಸ್ಟ್‌ ಆಫ್ ಕಾರ್ಡ್‌ ರೋಡ್‌ನಲ್ಲಿ ಕೂತಿದ್ದೆ. ಊಟ ಮಾಡದೇ ಮೂರ್ನಾಲ್ಕು ದಿನ ಆಗಿತ್ತು. ನನ್ನ ಜೇಬಿನಲ್ಲಿ ಒಂದು ಲಿಸ್ಟ್ ಯಾವಾಗೂ ನನ್ನ ಜತೆ ಇರುತ್ತಿತ್ತು. ಯಾವ ದೇವಸ್ಥಾನದಲ್ಲಿ ಯಾವ ದಿನ ಯಾವ ಪ್ರಸಾದ ಕೊಡ್ತಾರೆ ಅಂತ. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಪ್ರಸಾದ ಸಿಗುತ್ತಿರಲಿಲ್ಲ. ಆಗ ಒಬ್ಬರು ಹಿರಿಯರು ನನ್ನನ್ನು ನೋಡಿದರು. ಅವರ ಹೆಸರು ಕಾಮತ್. ಅವರು ನನ್ನನ್ನು ಕರೆದುಕೊಂಡು ಅವೆನ್ಯೂ ರೋಟ್​ನ ಒಂದು ಅಂಗಡಿಗೆ ಕರೆದುಕೊಂಡು ಹೋಗಿ ಈತ ಹಿತ್ತಾಳೆ, ಬೆಳ್ಳೆ ಕೆಲಸ ಎಲ್ಲಾ ಮಾಡ್ತಾನೆ, ಆದರೆ ಇವನಿಗೆ ಸಂಗೀತದ ಹುಚ್ಚು ಹಿಡಿದಿದೆ. ಅದಕ್ಕೆ ಕೆಲಸ ಮಾಡ್ತಿಲ್ಲ ಅಂತ ಒಬ್ಬ ವ್ಯಕ್ತಿ ಮುಂದೆ ಕೂರಿಸಿ ಹೇಳಿದರು" "ನಾನು ಮೊದಲು 5 ರೂ. ಕೊಡಿ. ತಿನ್ಕೊಂಡು ಬರ್ತೀನಿ. ಆಮೇಲೆ ನೀವು ಹೇಳಿದ್ದು ನನ್ನ ತಲೆಗೆ ಏರುತ್ತದೆ. ಚಿತ್ರನ್ನ ತಿಂದು ಬಂದು ಅವರ ಮುಂದೆ ಕುಳಿತುಕೊಂಡೆ.

ಆಗ ಅವ್ರು ನನ್ನನ್ನು ನೋಡಿ ಎಂತಹ ವ್ಯಕ್ತಿನ ಕರ್ಕೊಂಡು ಬಂದು ಕೂರಿಸಿದ್ದೀರಾ?. ಈತನನ್ನು ನೋಡಲು ಭೇಟಿ ಮಾಡಲು 5 ತಿಂಗಳು ಅಪಾಯಿಂಟ್‌ಮೆಂಟ್ ಬೇಕು. ಆ ರೀತಿ ಬೆಳೆಯುತ್ತಾನೆ ಎಂದರು, "ನಾನು ಜಾತಕ ನೋಡಿ ಈ ರೀತಿ ಹೇಳುವವರು ಬಹಳ ಸಿಗ್ತಾರೆ. ನನಗೆ ಮ್ಯೂಸಿಕ್ ಬೇಕು ಅಷ್ಟೆ ಎಂದೆ. ಆಗ ಆ ಮನುಷ್ಯ ನಿಮಗೆ ಏನು ಬೇಕು ಎಂದು ಕೇಳಿದರು. ನಾನು ಕೀಬೋರ್ಡ್ ತಗೋಬೇಕು, ದುಡ್ಡು ಕೊಡ್ತೀರಾ? ಎಂದೆ. ಕೂಡಲೇ 35 ಸಾವಿರ ರೂ. ಕೊಟ್ಟರು. ಅವ್ರು ಯಾರು ಅಂತಲೂ ನನಗೆ ಗೊತ್ತಿರಲಿಲ್ಲ. ನಾನು, ಕಾಮತ್ ಇಬ್ಬರೂ ಶಾಕ್ ಆಗಿದ್ದೆವು. ಈ ಹಣ ವಾಪಸ್ ಕೊಡುವುದು ಬೇಡ. ಕೀಬೋರ್ಡ್ ತಗೋ. ಈ 35 ಸಾವಿರಕ್ಕೆ ಕೆಲಸ ಕೊಡ್ತೀನಿ, ಕೆಲಸ ಮಾಡಿ ತೀರಿಸು ಅಂದ್ರು" "ಆ ವ್ಯಕ್ತಿಯ ಹೆಸರು ರವಿ. ಅವರು ನನ್ನ ಜೀವನದಲ್ಲಿ ಬೆಳಕಾದರು.

ಅಂದಿನಿಂದ ನನ್ನ ಹೆಸರು ಡಿಲೀಟ್ ಮಾಡಿ ನಾನು ಅವರ ಹೆಸರನ್ನು ನನ್ನ ಹುಟ್ಟೂರಿನ ಹೆಸರಿನೊಂದಿಗೆ ಸೇರಿಸಿಕೊಂಡು ಇಟ್ಟುಕೊಂಡಿದ್ದೇನೆ. ನೀವು ನನ್ನನ್ನು ಹೇಗೆ ಕರೆದರು ಆ ಕ್ರೆಡಿಟ್ ಅವರಿಗೆ ಕೊಡಬೇಕು ಎಂದು ಹೆಸರು ಬದಲಿಸಿಕೊಂಡೆ. ನಾನು ಇವತ್ತು ಏನೇ ಸಾಧಿಸಿದ್ದರು ಅದಕ್ಕೆ ಅವರು ಕಾರಣ ಅವರೆ ಆಗಿದ್ದಾರೆ. ನನ್ನ ನಿಜವಾದ ಹೆಸರು ಕಿರಣ್ ಎಂದು ಹೇಳಿದ್ದಾರೆ. ರವಿ ಬಸ್ರೂರು ಅವರ ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸೋಶಿಯಲ್​​ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ರವಿ ಬಸ್ರೂರು. ಇದೀಗ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ಮಾರ್ದನಿಸುತ್ತಿರುವ ಹೆಸರು. 'ಉಗ್ರಂ' ಚಿತ್ರದಲ್ಲಿ ತಮ್ಮ ಅದ್ಭುತ ಸಂಗೀತದಿಂದ ಸದ್ದು ಮಾಡಿದ ಉಡುಪಿ ಮೂಲದ ಪ್ರತಿಭೆ ಈಗ ಬಾಲಿವುಡ್ ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. 'KGF' ಸರಣಿ ಸಿನಿಮಾ ರವಿ ಬಾಳಿಗೆ ಬೆಳಕಾಗಿದ್ದು ಸುಳ್ಳಲ್ಲ. ಇದೀಗ ತೆಲಗು ಸಿನಿಮಾ ಭೀಮಾ ಸಿನಿಮಾ ರೆಕಾರ್ಡಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net