

ಬೆಂಗಳೂರು: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ( Sudeep First Gtift Gave To His Mother ) ಅವರ ತಾಯಿ ವಿಧಿವಶರಾಗಿ ಇಂದಿಗೆ ಮೂರು ದಿನಗಳಾಗಿದೆ. ತಾಯಿಯನ್ನು ಕಳೆದುಕೊಂಡ ದುಖಃವನ್ನು ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಹಾಗೂ ಅವರ ತಾಯಿ ಕುರಿತಾದ ಕೆಲವು ಭಾವನಾತ್ಮಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನಟ ಸುದೀಪ್ ಬಗ್ಗೆ ತಾಯಿ ಸರೋಜಾ ಅವರು ಮಾತನಾಡಿದ್ದರು. ಸುದೀಪ್ ಬಾಲ್ಯದ ಬಗ್ಗೆ ನೆನೆಪಿಸಿಕೊಂಡಿದ್ದರು. 7ನೇ ತರಗತಿಯಲ್ಲಿದ್ದಾಗ ಸುದೀಪ್ ತಾಯಿಗೆ ಮೊದಲ ಬಾರಿ ಸೀರೆವೊಂದನ್ನು ಉಡುಗೊರೆ ನೀಡಿದ್ದರು. ಆ ಸೀರೆಯನ್ನು ಶೋಗೆ ತಂದು ಅದರ ಬಗ್ಗೆ ಮಾತನಾಡಲಾಗಿತ್ತು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸುದೀಪ್ ಅವರು ಮಾತನಾಡಿ, ಕೇಂಬ್ರಿಡ್ಜ್ ಶಾಲೆಯಲ್ಲಿ ಓದುತ್ತಿದ್ದೆ. ಆಗ ದೆಹಲಿ, ಆಗ್ರಾಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಪ್ರವಾಸದ ವೇಳೆ ಸೀರೆ ನೋಡಿ ಇಷ್ಟವಾಗಿ ಖರೀದಿಸಿ ತಂದಿದ್ದೆ. 7ನೇ ತರಗತಿಯಲ್ಲಿದ್ದಾಗ ಪಾಕೆಟ್ ಮನಿ ಉಳಿಸಿ ತಾಯಿಗಾಗಿ ಸುದೀಪ್ ಕೊಡಿಸಿದ್ದ ಸೀರೆ ಅದು. ಆ ಸೀರೆಯನ್ನು ಇಂದಿಗೂ ಭದ್ರವಾಗಿ ಸರೋಜಮ್ಮ ಇಟ್ಟುಕೊಂಡಿದ್ದಾರೆಂದು ಹೇಳಿದ್ದರು. ಸುದೀಪ್ ಸಾಧನೆಗೆ ತಾಯಿ ನಿಜವಾದ ಶಕ್ತಿ ಆಗಿದ್ದರು. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಕಿಚ್ಚ ಹೇಳಿಕೊಂಡಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಾಯಿ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಭಾನುವಾರ ಮುಂಜಾನೆ 07:04ಕ್ಕೆ ಸರೋಜಾ ಇಹಲೋಕ ತ್ಯಜಿಸಿದ್ದರು. ಸರೋಜಾ ಅವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿ ಮಿಡಿದಿತ್ತು. ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಹಿಂದೂ ಸಂಪ್ರದಾಯದಂತೆ ಸುದೀಪ್ ತಾಯಿಯ ಅಂತ್ಯಕ್ರಿಯೆ ನಡೆದಿದೆ.
&
ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣದ (Srirangapatna) ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ಸರೋಜಮ್ಮನ ಅಸ್ತಿ ವಿಸರ್ಜಿಸಿ ಸದ್ಗತಿಗಾಗಿ ಸುದೀಪ್ ಪ್ರಾರ್ಥಿಸಿದ್ದಾರೆ. ವಿಧಿ ವಿಧಾನ ಕಾರ್ಯದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದಾರೆ.