More

    ಕಾಟೇರ ಸಿನಿಮಾಗಾಗಿ ನಟಿ ಮಾಲಾಶ್ರೀ ಪುತ್ರಿ ಆರಾಧನಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

    ನವದೆಹಲಿ: ನಟ ದರ್ಶನ್​​ ಅಭಿನಯದ ಬಹುನೀರಿಕ್ಷಿತ ಸಿನಿಮಾ ಕಾಟೇರ.  ಈ ಸಿನಿಮಾ ಮೂಲಕವಾಗಿ  ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್  ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆರಾಧನಾ ರಾಮ್  ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. 

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳ ಮೂಲಕ ಅನೇಕ ಹೊಸ ನಟಿಯರು ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಲಿಸ್ಟ್​ಗೆ ಇದೀಗ ಆರಾಧನಾ ರಾಮ್​ ಸೇರಿದ್ದಾರೆ. ಆರಾಧನಾ ಬ್ಯೂಟಿಗೆ ಈಗಾಗಲೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಾಟೇರ ಸಿನಿಮಾಗಾಗಿ ಆರಾಧನಾ ಪಡೆದ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳಲು ಫ್ಯಾನ್ಸ್​​ ಸೋಶಿಯಲ್​​ ಮೀಡಿಯಾದಲ್ಲಿ ಹುಡುಕಾಡಿದ್ದಾರೆ.

    ಮೊದಲ ಸಿನಿಮಾ ಕಾಟೇರಗೆ ನಟಿ ಆರಾಧನಾ ಪಡೆದ ಸಂಭಾವನೆ ಎಷ್ಟು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ ಆರಾಧನಾ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು 10 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.

    ಮುಂಬೈನಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದ ಆರಾಧನಾ ರಾಮ್​, ಮೊದಲ ಸಿನಿಮಾದಲ್ಲಿ ಕನ್ನಡಿಗರ ಮನಗೆಲ್ಲಲು ಭರ್ಜರಿ ಪ್ಲಾನ್ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಆರಾಧನಾ ರಾಮ್​ ಕಾಟೇರ್ ಪ್ರಮೋಷನ್ ಜೋರಾಗಿ ಮಾಡ್ತಿದ್ದಾರೆ. ಆರಾಧನಾ ರಾಮ್​ ಆ್ಯಕ್ಟಿಂಗ್​ ಹೇಗೆ ಇದೆ ಎಂದು ತಿಳಿದುಕೊಳ್ಳಲು ಸಿನಿಮಾ ತೆರೆ ಮೇಲೆ ಬರುವವರೆಗೂ ಕಾಯಬೇಕಾಗಿದೆ.

    ನಮಸ್ಕಾರ ದೇವ್ರು ಖ್ಯಾತಿಯ ಡಾ. ಬ್ರೋ ಮಿಸ್ಸಿಂಗ್​!; ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts