ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುತ್ತೀರಾ? ಹಾಗಿದ್ದರೆ, ಇದನ್ನೊಮ್ಮೆ ನೋಡಿ Health tips

banana
Published on

Health tips: ಬಾಳೆಹಣ್ಣು ಒಂದು ಪೌಷ್ಟಿಕ ಆಹಾರವಾಗಿದ್ದು, ಇದರಲ್ಲಿ ಪೊಟ್ಯಾಶಿಯಂ, ವಿಟಮಿನ್ B6, ಫೈಬರ್​ನಂತಹ ಪೋಷಕಾಂಶಗಳನ್ನು ಹೊಂದಿದೆ. ಆದರೆ, ಕೆಲವರು ಬಾಳೆಹಣ್ಣನ್ನು ತಿಂದ ತ್ಕಷಣ ನೀರನ್ನು ಕುಡಿಯುತ್ತಾರೆ. ಇದು ಸಾಮಾನ್ಯ ತಪ್ಪು ಎಂದು ಹಲವರು ವಾದಿಸುತ್ತಾರೆ. ಇದರಿಂದ ಜೀರ್ಣಕ್ರಿಯೆಯಲ್ಲಿ ಗಂಭೀರ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಹಾಗಿದ್ದರೆ ಇದು ನಿಜವೇ? ನಿಜವಾದರೆ ಯಾವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ನೋಡೋಣ ಬನ್ನಿ..

ಯಾವುದೇ ವ್ಯಕ್ತಿಯು ಬಾಳೆಹಣ್ಣನ್ನು ಸೇವಿಸಿದ ನಂತರ, ಅದು ಜೀರ್ಣವಾಗಲು ಸುಮಾರು 45 ನಿಮಿಷ ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಸ್ಟಾರ್ಚ್ ಮತ್ತು ಸುಕೋಸ್‌ನಂತಹ ಕಾರ್ಬೊಹೈಡ್ರೇಟ್‌ಗಳನ್ನು ಹೊಂದಿದ್ದು, ಹೊಟ್ಟೆಯಲ್ಲಿ ಆಮ್ಲಗಳಿಂದ ತುಂಬಿಕೊಳ್ಳುತ್ತದೆ. ಆದರಿಂದ ಇದನ್ನು ಸೇವಿಸಿದ ನಂತರ ತಕ್ಷಣವೇ ನೀರನ್ನು ಕುಡಿಯುವುದು ಜೀರ್ಣಕ್ರಿಯೆಯು ನಿಧಾನಗತಿಯಾಗಿ ಸಾಗುತ್ತದೆ. ಇದರಿಂದ ಅಜೀರ್ಣ, ಗ್ಯಾಸ್​, ಉಬ್ಬರದಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ವಿಶೇಷವಾಗಿ, ಬಾಳೆಹಣ್ಣಿನಲ್ಲಿರುವ ಪೊಟ್ಯಾಶಿಯಂ ನೀರಿನೊಂದಿಗೆ ಸೇರಿ ಹೊಟ್ಟೆಯ pH ಮಟ್ಟವನ್ನು ಬದಲಾಯಿಸಿ, ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಇದು ಉಬ್ಬರಿಕೆ, ಹೊಟ್ಟೆ ನೋವು, ದುರಾಗ್ರಹಣಕ್ಕೆ ಕಾರಣವಾಗಬಹುದು.

ಆಯುರ್ವೇದದ ದೃಷ್ಟಿಕೋನ

ಆಯುರ್ವೇದದಲ್ಲಿ ಬಾಳೆಹಣ್ಣನ್ನು 'ಉಷ್ಣ' ಗುಣವನ್ನು ಹೊಂದಿದೆ. ಇದು ನೀರು ಜೀರ್ಣಶಕ್ತಿ ಅಗ್ನಿಯನ್ನು ದುರ್ಬಲಗೊಳಿಸುತ್ತದೆ. ಇದರಿಂದ ದೇಹದ ದೋಷ, ಸಮತೋಲನ ಪಿತ್ತ, ಕಫ, ಟಾಕ್ಸಿನ್​ಗಳು ಸಂಗ್ರಹವಾಗುತ್ತವೆ. ಇದು ಶೀತ, ಜ್ವರ, ಕೆಮ್ಮು ಅಥವಾ ಚಯಾಪಚಯ ಸಮಸ್ಯೆಗಳನ್ನು ಹೊಂದಬಹುದು.

ಆಯುರ್ವೇದ ತಜ್ಞರ ಪ್ರಕಾರ, ಬಾಳೆಹಣ್ಣು ತಿಂದ ನಂತರ ಕನಿಷ್ಠ 30 ನಿಮಿಷಗಳು ನೀರು ಕುಡಿಯಬಾರದು ಎಂದು ಸಲಹೆ ನೀಡುತ್ತಾರೆ. ತಂಪು ಪಾನೀಯಗಳ ಬದಲು ವಾರ್ಮ್​ ನೀರನ್ನು ಕುಡಿಯಬೇಕು ಎಂದು ತಿಳಿಸಿದ್ದಾರೆ.

ಅಧ್ಯಯನಗಳ ಪ್ರಕಾರ, ಬಾಳೆಹಣ್ಣು ತಿಂದ ನಂತರ ನೀರನ್ನು ಕುಡಿಯುವುದು ಸಂಪೂರ್ಣವಾಗಿ ಹಾನಿಕಾರಕವೆಂದು ಹೇಳುವುದಿಲ್ಲ. ಬಹುತೇಕ ವ್ಯಕ್ತಿಗಳಿಗೆ ತಕ್ಷಣ ನೀರು ಕುಡಿಯುವುದು ಸುರಕ್ಷಿತವೇ ಆದರೂ, ಜೀರ್ಣ ಸಮಸ್ಯೆ ಇರುವಂತಹವರು ಇದು ಅಸ್ವಸ್ಥತೆ ಹಾಗೂ ಒತ್ತಡವನ್ನು ಹೆಚ್ಚಿಸುತ್ತದೆ.

ಸಲಹೆಗಳು

ಯಾವುದೇ ವ್ಯಕ್ತಿಯು ಬಾಳೆಹಣ್ಣನ್ನು ತಿಂದ ನಂತರ 30 ನಿಮಿಷಗಳ ಕಾಲ ಕಾಯಿರಿ. ಇದು ಪೋಷಕಾಂಶಗಳು ಸಂಪೂರ್ಣವಾಗಿ ಶೋಷಣೆಯಾಗುತ್ತವೆ. ಬಾಳೆಹಣ್ಣನ್ನು ಬೆಳಿಗ್ಗೆ ಅಥವಾ ಮಧ್ಯಾಹ್ನದಲ್ಲಿ ತಿನ್ನಿ, ಇದರ ಶಕ್ತಿ ಪೂರ್ಣವಾಗಿ ಪಡೆಯಿರಿ. ಯಾವುದೇ ದೈನಂದಿನ ಆಹಾರದೊಂದಿಗೆ ಸಮತೋಲನ ಕಾಯ್ದುಕೊಳ್ಳಿ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net