

‘ಸಾವರ್ಕರ್’ ಎಂದರೆ ಕಿಡಿಕಾರುವ ಕಾಂಗ್ರೆಸ್ಸಿಗೆ ಮಾವೋ ಬೇಕು, ಸ್ಟಾಲಿನ್ ಬೇಕು, ಸೋನಿಯಾ ಬೇಕು-ಸುಭಾಷ್ ಬೇಡ, ಶ್ಯಾಂಪ್ರಸಾದ್, ಭಗತ್ ಸಿಂಗ್, ಗುರು ಗೋವಿಂದ ಸಿಂಗರು ಬೇಡ, ಶಿವಾಜಿ ಬೇಡ-ಬರೀ ನೆಹ್ರೂ ಕುಟುಂಬದ ಭಜನೆ ಸಾಕು. ಎಲ್ಲೆಡೆ ನೆಹ್ರೂ, ಇಂದಿರಾ, ರಾಜೀವ್, ಸಂಜಯ್ ಇವರ ಹೆಸರುಗಳೇ ರಾರಾಜಿಸುತ್ತವೆ.
ನಮಗಾಗಿ ದುಡಿದವರ, ಪ್ರಾಣಾರ್ಪಣೆ ಮಾಡಿದವರ, ನಮ್ಮ ಕೀರ್ತಿ, ಹೆಮ್ಮೆ, ಅಭಿವೃದ್ಧಿಗೆ ಕಾರಣರಾದವರ, ನೈಜ ರಾಷ್ಟ್ರೀಯ ರತ್ನಗಳ ಬಗೆಗೆ ನಾವು ಅಭಿಮಾನ ಪಡುವುದನ್ನೇ ಮರೆತಿದ್ದೇವೆಯೇ? ನಮಗೆ ಸುಭಾಷ್, ಸಾವರ್ಕರ್, ತಿಲಕ್ರಂಥ ಘನ, ಪ್ರಾತಃಸ್ಮರಣೀಯರ ಬಗೆಗೆ ಇನ್ನೂ ತಿರಸ್ಕಾರ! ನೆಹ್ರೂ ಪರಂಪರೆಯ ಆತ್ಮವಿಸ್ಮೃತಿ ಚುಚ್ಚುಮದ್ದು ಚುಚ್ಚಿಸಿಕೊಂಡ ಇಂದಿನವರೆಗಿನ ಕಾಂಗ್ರೆಸ್ಸು, ಪರಕೀಯರನ್ನು ಹೊಗಳಿ, ಸ್ವದೇಶೀ ಸಾಧನೆಗಳನ್ನು ಅಲ್ಲಗಳೆಯುತ್ತದೆ. ಮೋದಿಯವರ ಎಲ್ಲ ಸಾಧನೆಗಳೂ ಇವರಿಗೆ ನಗಣ್ಯ! ಸರ್ಜಿಕಲ್ ಸ್ಟ್ರೈಕ್ ಇರಬಹುದು, ಕಾಶ್ಮೀರ ಸ್ವಾಧೀನ ಸಾಧನೆ ಇರಬಹುದು, ರಾಮ ಜನ್ಮಭೂಮಿ ತಂಟೆ ಪರಿಹಾರ ಇರಬಹುದು, ಚೀನಾ ಜತೆ ಕಾದಾಡುವ ಸಾಮರ್ಥ್ಯ ಬಲವೃದ್ಧಿ ಇರಬಹುದು, ಎಲ್ಲವನ್ನೂ ಅಲ್ಲಗಳೆಯುತ್ತಾರೆ ಸೋನಿಯಾ. ಇವರು ಕಾಂಗ್ರೆಸ್ಸಿಗರಿಗೆ ಮಾನ್ಯ, ಆದರ್ಶ, ರೋಲ್ ಮಾಡೆಲ್!
ಇತ್ತೀಚೆಗೆ ಲಡಾಖ್ನಲ್ಲಿ 20 ಭಾರತೀಯ ಯೋಧರ ವೀರಮರಣದ ಬಗ್ಗೆ, ಚೀನೀ ಮೋಸದ ಬಗ್ಗೆ, ಎಚ್ಚರಿಕೆ ನೀಡಿದ ಮೋದಿ ಭಾಷಣ ಇವರಿಗೆ "Empty Speech'! ಇವರೆಂಥವರಯ್ಯ? ಯಾರಿಗೆ ಮಾರಿಕೊಂಡವರಯ್ಯ? ಇಂಟರ್ನೆಟ್ನಲ್ಲಿ ಲಭ್ಯವಾದ ಒಂದು ಅಪೂರ್ವ ಮಾಹಿತಿ ಇಲ್ಲಿ-ಜಪಾನೀಯರ ಮೆಚ್ಚುಗೆಗೆ ಪಾತ್ರನಾದ ಭಾರತೀಯ ನ್ಯಾಯವಾದಿ ಕಥೆ ಹೇಳುತ್ತೇನೆ.
ಎರಡನೇ ಮಹಾಯುದ್ಧದ ಸಂದರ್ಭ. ವಿಜಯಿಗಳಾದ ಐರೋಪ್ಯ ಒಕ್ಕೂಟ- "Allies'-ಜರ್ಮನಿಯಲ್ಲಿ ‘ನ್ಯೂರೆಂಬರ್ಗ್ ಟ್ರಯಲ್ಸ್’ನಲ್ಲಿ ‘ಯುದ್ಧಕೈದಿ’ಗಳನ್ನು ಸಾಯಿಸಿತಲ್ಲ? ಅಂಥದೊಂದು ನಾಟಕ ಜಪಾನಿನಲ್ಲೂ ನಡೆಯಿತು. ‘ಟೋಕಿಯೋ ಟ್ರಯಲ್ಸ್’ ಎಂಬುದು. ಈಚೆಗೆ ಆ ಘಟನೆ ಚಿತ್ರಪಟವೂ ಆಗಿದೆ. ಅಂದು 1948ರ ನವೆಂಬರ್ 12. ಟೋಕಿಯೋ ನಗರದ ಒಂದು ತೋಟದ ಮನೆಯಲ್ಲಿ ಕೈದಿಗಳ ವಿಚಾರಣೆ ನಡೆದಿತ್ತು. 55 ಜಪಾನೀಯರನ್ನು ಮರಣದಂಡನೆಗೆ ಗುರಿ ಮಾಡಿದ ತೀರ್ಪಿನ ಸಂದರ್ಭ. ಅದರಲ್ಲಿ ಜಪಾನಿನ ಅಂದಿನ ಪ್ರಧಾನಿ ಟೋಜೋ ಸೇರಿ 28 ಜನರಿಗೆ ‘ಕ್ಲಾಸ್-ಎ’ ಪಟ್ಟ. ‘ಶಾಂತಿಗೆ ಭಂಗಕಾರರು’ ಎಂಬ ಆಪಾದನೆ. ಇವರಿಗೆ ಸಾವು ಕಾದಿತ್ತು. ಹನ್ನೊಂದು ಜನ ಅಂತಾರಾಷ್ಟ್ರೀಯ ಕಾನೂನುವಿದರು ಸೇರಿ, ಇನ್ನೇನು ಮರಣದಂಡನೆ ವಿಧಿಸುವಷ್ಟರಲ್ಲಿ ಒಂದು ಒಂಟಿ ದನಿ-‘ನಾಟ್ ಗಿಲ್ಟಿ’! ‘ಇವರು ಅಂಥ ಅಪರಾಧಾರ್ಹರಲ್ಲ’ ಅಂತ. ಅದು ಒಬ್ಬನೇ ಒಬ್ಬ ಭಾರತೀಯ ನ್ಯಾಯಮೂರ್ತಿಯ ಗರ್ಜನೆ. ಈತ ಯಾರು? ಎಲ್ಲರೂ ಮೌನ. ಅವರ ಕಥೆ ಕೇಳಿ. ಅವರ ಹೆಸರು ರಾಧಾ ವಿನೋದ್ ಪಾಲ್ ಅಂತ. ಬಂಗಾಳೀ. 1886ರಲ್ಲಿ ಬಂಗಾಳದ ‘ಕುಂಭ’ ಜಿಲ್ಲೆಯಲ್ಲಿ ಜನನ (ಈಗ ಬಾಂಗ್ಲಾದೇಶದಲ್ಲಿದೆ). ಆಗ ಅವಿಭಜಿತ ಬಂಗಾಳ ಅದು. ಇವರ ಕತೆ ಒಂದು ಪವಾಡ, ಅದ್ಭುತ. ಈತ ಹುಡುಗನಾಗಿದ್ದಾಗ ತಾಯಿ ಅಲ್ಲಿ ಇಲ್ಲಿ ಮನೆಗೆಲಸ ಮಾಡಿಕೊಂಡು ಜೀವಿಸುತ್ತಿದ್ದಳು. ಮನೆಯೊಡೆಯರು ಇವಳಿಗೆ ದನ ಕಾಯುವ ಚಾಕರಿಯನ್ನೂ ಹೇರಿದ್ದರು. ಇವಳ ಮಗ ಈ ರಾಧಾ ವಿನೋದ್ ಪಾಲನಿಗೆ ಈ ಕೆಲಸ ತಾಯಿ ಕಡೆಯಿಂದ ಬಂದಿತ್ತು. ಒಂದು ಸ್ಕೂಲಿನ ಅಂಗಳದಲ್ಲಿ ದನ ಮೇಯಿಸುವಾಗ, ಹೊರಗಿದ್ದೇ ಒಳಗಿನ ಪಾಠಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದ. ಈತ ಅಲ್ಲಿ ಆಗ ಅಧಿಕೃತ ವಿದ್ಯಾರ್ಥಿ ಅಲ್ಲ. ಒಮ್ಮೆ ಶಾಲೆಗೆ ಇನ್ಸ್ಪೆಕ್ಟರ್ ಬಂದು ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತ ಅನೇಕ ಪ್ರಶ್ನೆಗಳನ್ನು ಹಾಕಿದರು. ಒಳಗಿದ್ದವರು ಯಾರೂ ಉತ್ತರಿಸಲಾಗಲಿಲ್ಲ! ಹೊರಗಿಂದ ಈ ರಾಧಾ ವಿನೋದ್, ‘ನಾನು ಹೇಳುತ್ತೇನೆ’ ಎಂದ. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ. ಇನ್ಸ್ಪೆಕ್ಟರು, ‘ನೀನು ಯಾವ ತರಗತಿಯಲ್ಲಿದ್ದೀಯೆ?’ ಎಂದಾಗ ಈತ ತನ್ನ ಸ್ಥಿತಿ ಹೇಳಿದ. ಅಲ್ಲಿಂದಾಚೆಗೆ ಅವನ ಅದೃಷ್ಟ ಒಲಿಯಿತು. ಇನ್ಸ್ಪೆಕ್ಟರು ಅಲ್ಲಿ ಶಾಲೆಗೆ ಸೇರಿಸಿ, ಜೀವನ ನಿರ್ವಹಣೆಗೆ ಹಣವನ್ನೂ ಸ್ಕೂಲಿಂದ ಏರ್ಪಡಿಸಿದರು. ಈತ ಸ್ಕೂಲಿನಲ್ಲಿ, ಆಮೇಲೆ ಪ್ರೆಸಿಡೆನ್ಸಿ ಕಾಲೇಜ್, ಕಲ್ಕತ್ತೆಯಲ್ಲಿ, ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ಶ್ರೇಣಿಯಲ್ಲಿ ಪಾಸಾಗುವಂತೆ ಆಗಿ, ಎಂ.ಎಸ್ಸಿ. ಮಾಡಿ, ಲಾ ಕಾಲೇಜಿನಲ್ಲೂ ಓದಿ, ಅಲ್ಲಿ ಡಾಕ್ಟರೇಟೂ ಪಡೆದು ವಿಶ್ವವಿಖ್ಯಾತ ನ್ಯಾಯಮೂರ್ತಿಯಾದ.
ಟೋಕಿಯೋ ಟ್ರಯಲ್ಸ್ನಲ್ಲಿ ಇವರನ್ನು ಐರೋಪ್ಯರು ಕರೆದು ಸೇರಿಸಿಕೊಂಡರೆಂದರೆ ಇವರ ಪ್ರತಿಭೆ ಎಂಥದು! ಇವರು ಅಲ್ಲಿ ವಾದ ಮಾಡಿದರು! ಐರೋಪ್ಯರು ಉಲ್ಲಂಘಿಸಿದ ಅಂತಾರಾಷ್ಟ್ರೀಯ ನಿಯಮಗಳನ್ನೂ ಎತ್ತಿ ತೋರಿಸಿದರು. ‘ಜಪಾನ್’ ಶರಣಾಗುವ ಇಚ್ಛೆ ತೋರಿದರೂ ಅಲಕ್ಷಿಸಿದ್ದು, ಮಲಗಿದ್ದವರ ಮೇಲೆ, 2 ಲಕ್ಷ ಜನರ ಮೇಲೆ, ಹಿರೋಷಿಮಾ, ನಾಗಾಸಕಿ ನಗರಗಳ ಮೇಲೆ ಬಾಂಬ್ ಸಿಡಿಸಿ, ಸಾಯಿಸಿದ್ದು, ಇವೆಲ್ಲ ಘೋರ ಅಪರಾಧ ಆಗಿ, ಶಾಂತಿಭಂಗವಾಗಿರುವಾಗ ಈ ಜಪಾನೀಯರದೇನು ಮಹಾ?’ ಎಂದು ವಾದಿಸಿ ಐರೋಪ್ಯರ ಕ್ರೌರ್ಯಕ್ಕೆ ಕನ್ನಡಿ ಹಿಡಿದ. ತೀರ್ಪಿನಲ್ಲಿ ಇದು ಮನ್ನಣೆಯಾಗಿ ಅಪರಾಧಿಗಳು ‘ಕ್ಲಾಸ್-ಬಿ’ ಎಂದು ಪರಿಗಣಿತರಾಗಿ, ಜೀವ ಉಳಿದು ಬರೀ ಸಾದಾ ಶಿಕ್ಷೆಯಾಯ್ತು! ಈ ನ್ಯಾಯಮೂರ್ತಿಯನ್ನು ಇಂದಿನ ದಿನಕ್ಕೂ ಜಪಾನ್ ಸ್ಮರಿಸುತ್ತದೆ, ದೇಶದ ಅತ್ಯುನ್ನತ ಗೌರವ ಪದವಿ ಕೊಟ್ಟು, ಮನ್ನಣೆ ನೀಡಿದೆ. ಟೋಕಿಯೋ, ಕೆಯೊಟೋ ನಗರಗಳಲ್ಲಿ ಎರಡು ರಸ್ತೆಗೆ ಅವರ ಹೆಸರನ್ನು ಇಟ್ಟಿದೆ. ಕಾನೂನು ಕಾಲೇಜುಗಳಲ್ಲಿ ಅವರ ತೀರ್ಪು ಪಠ್ಯವಾಗಿದೆ. ಅವರ ತೀರ್ಪು ಎಷ್ಟು ಉದ್ದ ಗೊತ್ತೆ? 1,232 ಪುಟಗಳಷ್ಟು! ಅವರ ಪ್ರತಿಮೆಯನ್ನು ಇಟ್ಟಿದ್ದಲ್ಲದೆ, 2007ರಲ್ಲಿ ಪ್ರಧಾನಿ ಶಿಂಜೋ ಅಬೆ ಭಾರತಕ್ಕೆಬಂದಾಗ, ಅವರು, ಇವರ ಕುಟುಂಬವನ್ನು ಭೇಟಿಮಾಡಲು ಇಚ್ಛಿಸಿದರು-ಇಲ್ಲಿಯ ಭೇಟಿಯ ವೇಳೆಗೆ! ಆಗ ರಾಧಾ ವಿನೋದರ ಮಗ ಇದ್ದು, ಆತನನ್ನು ಜಪಾನ್ ಗೌರವಿಸಿತು. ರಾಧಾ ವಿನೋದರು 1967ರ ಜನವರಿಯಲ್ಲಿ ತೀರಿಕೊಂಡರು. ಜಪಾನಿನ ಒಂದು ಶ್ರದ್ಧಾಕೇಂದ್ರದಲ್ಲಿ ಇವರ ಹೆಸರಲ್ಲಿ ಒಂದು ವಸ್ತು ಸಂಗ್ರಹಾಲಯ ಇದೆ. ಜಪಾನ್ನ ಒಂದು ವಿಶ್ವವಿದ್ಯಾಲಯ ಇವರ ಹೆಸರಲ್ಲಿ ಅಧ್ಯಯನಪೀಠ ಸ್ಥಾಪಿಸಿದೆ. ಇದು ಜಪಾನೀಯರ ಭಾರತ ಗೌರವಕ್ಕೆ ಸಾಕ್ಷಿ.
ನಮ್ಮಲ್ಲಿ? ವ್ಯಾಸರ ಹೆಸರಲ್ಲಿ ವಿಶ್ವವಿದ್ಯಾಲಯ ಇದೆಯೇ? ವಾಲ್ಮೀಕಿಯ ಹೆಸರಲ್ಲಿ? ಶ್ರೀಕೃಷ್ಣ ಯುನಿವರ್ಸಿಟಿ ಇದೆಯೇ? ‘ಸಾವರ್ಕರ್’ ಎಂದರೆ ಕಿಡಿಕಾರುವ ಕಾಂಗ್ರೆಸ್ಸಿಗೆ ಮಾವೋ ಬೇಕು, ಸ್ಟಾಲಿನ್ ಬೇಕು, ಸೋನಿಯಾ ಬೇಕು-ಸುಭಾಷ್ ಬೇಡ, ಶ್ಯಾಂಪ್ರಸಾದರು ಬೇಡ, ಭಗತ್ ಸಿಂಗ್, ಗುರು ಗೋವಿಂದ ಸಿಂಗರು ಬೇಡ, ಶಿವಾಜಿ ಬೇಡ-ಬರೀ ನೆಹ್ರೂ ಕುಟುಂಬದ ಭಜನೆ ಸಾಕು. ಎಲ್ಲೂ ನೆಹ್ರೂ, ಇಂದಿರಾ, ರಾಜೀವ್, ಸಂಜಯ್ ಇವರ ಹೆಸರುಗಳೇ ರಾರಾಜಿಸುತ್ತವೆ. ಹೇಳಿ, ನಮಗೆ ಸ್ವಾಭಿಮಾನ ಇದೆಯೇ? ಅಯ್ಯಾ ಜಪಾನೀಯರ ಮೂಲಧರ್ಮ ‘ಷಿಂಟೋ’. ಅದು ಹಿಂಟೋ, ಹಿಂದೋ, ಹಿಂದೂ ಎಂಬುದರ ಅಪಭ್ರಂಶ. ಅವರು ಪಿತೃಪೂಜಕರು. ಶ್ರಾದ್ಧ ಮಾಡಿ ನೆನಪಿಸಿಕೊಳ್ಳುತ್ತಾರೆ. ಗೋಕರ್ಣದಲ್ಲಿ ಬಂದು ‘ನಾರಾಯಣ ಬಲಿ’ ಹಾಕಿ, ಗತಿಸಿದವರ ಉತ್ತರಕ್ರಿಯೆ ಮಾಡಿದ್ದನ್ನು ನಾನು ನೋಡಿದ್ದೇನೆ. ಅಶೋಕನ ನಂತರ ಬೌದ್ಧಧರ್ಮ ಅಲ್ಲಿ ಸೇರಿತು. ಒಂದು ಭೇಟಿಯ ಸಂದರ್ಭದಲ್ಲಿ ಮೋದಿಯವರು ಅವರಿಗೆ ಗೀತೆಯನ್ನೂ, ‘ಧಮ್ಮಪದ’ ಬೌದ್ಧಗ್ರಂಥವನ್ನೂ ಕಾಣಿಕೆ ಇತ್ತದ್ದು ನಿಮಗೆ ಮರೆತಿರಬಹುದು! ಜಪಾನೀಯರು ಜರ್ಮನಿಯವರಂತೆ ಬುದ್ಧಿವಂತರು, ಕುಶಲರು, ನಿರ್ವಣದಲ್ಲಿ ನಿಪುಣರು. ಮಹಾಯುದ್ಧಾನಂತರ ಎರಡು ತುಂಡಾಗಿಯೂ, ಆಮೇಲೆ ಒಂದಾದ ದೇಶ. ಜರ್ಮನಿಯಂತೆ! ಉದ್ದಿಮೆ, ವ್ಯಾಪಾರ ನಡೆಯುತ್ತ ಸೃಷ್ಟಿ, ವ್ಯವಸಾಯ, ಭೂಕಂಪ ಪ್ರದೇಶಗಳಲ್ಲೂ ಬೀಳದ ಕಟ್ಟಡವಾಸ್ತು ನಿರ್ಮಾಣ ನೈಪುಣ್ಯ, ಕ್ರಿಯಾಶೀಲ, ಶ್ರಮಜೀವಿಗಳ ದೇಶ ಅದು. ಸೋಮಾರಿಗಳು ಅಲ್ಲಿಲ್ಲ. ಎಲ್ಲ ಇಲ್ಲೇ! ‘ಅನ್ನಭಾಗ್ಯ, ಕನ್ನಭಾಗ್ಯ, ಸ್ಮಶಾನಭಾಗ್ಯ’ಗಳು ಅಲ್ಲಿಲ್ಲ. ಎಲ್ಲ ಇಲ್ಲೇ; ಸೋಮಾರಿತನಕ್ಕೆ ಕುಮ್ಮಕ್ಕು! ಅಲ್ಲಿ ‘ಬಂದ್’ಗಳು ತೀರಾ ಅಪರೂಪ! ಅಲ್ಲಿ ಇಸ್ಲಾಂ ಮೂಲಭೂತವಾದಿಗಳ ಕಾಟ ಇಲ್ಲ. ಕಾನೂನು ಬಿಗಿಯಾಗಿದೆ. ಯಾರೂ ಕುರಾನ್ ಒಯ್ಯುವಂತೆ ಇಲ್ಲ. ಮತಾಂತರ ಹಾವಳಿ ಇಲ್ಲ. ದುರದೃಷ್ಟವಶಾತ್ ಎರಡನೇ ಮಹಾಯುದ್ಧದಲ್ಲಿ ಜಪಾನ್ ತಪು್ಪ ಮಾಡಿ, ವಿಷಮಕೂಟ ಸೇರಿತ್ತು. "Pearl harbor' ಘಟನೆಯಲ್ಲಿ ಜಪಾನೀ ಸಿಪಾಯಿಗಳ ಸಾಹಸಗಾಥೆ ನೆನೆಯುವಂಥದ್ದು. ಚೀನಾಕ್ಕೂ, ಜಪಾನಿಗೂ ಎಂದೆಂದೂ ವೈರ. ಈಗ ಜಪಾನ್ ಭಾರತಕ್ಕೆ ಹತ್ತಿರವಾಗಿದೆ. ತೈವಾನ್, ಹಾಂಕಾಂಗ್, ಜಪಾನ್, ವಿಯೆಟ್ನಾಂ-ಯಾರಿಗೂ ಚೀನಾ ಕಂಡರೆ ಆಗದು. ಭಾರತ ಈ ದೇಶಗಳೊಡನೆ ಸ್ನೇಹದಲ್ಲಿ ಇರುತ್ತ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನೌಕಾಪಡೆಗೂ, ಸರಕು ಸಾಗಣೆಗೂ ಪ್ರಬಲ ಅಡ್ಡಿಯಾಗುವ ಸಂಭವ ಚೀನಿಯರಿಗೆ ತಲೆನೋವು!
ಅತ್ತ ರಷ್ಯಾ, ಇತ್ತ ತುರ್ಕಮೆನಿಸ್ತಾನ, ಇನ್ನೊಂದತ್ತ ದಕ್ಷಿಣ ಕೊರಿಯಾ-ಎಲ್ಲ ಕಡೆ ಚೀನಿಯರು ವೈರಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇತ್ತೀಚಿನ ಮೋದಿ ಭಾಷಣ ಕೇಳಿದ ಮೇಲೆ ನೆನಪಾದದ್ದು- ನಮ್ಮೊಡನೆ ನಿಲ್ಲಬಲ್ಲವರು ಇವರೇ-ಮತ್ತು ಇಸ್ರೇಲ್. ಭಾರತವು ಮೋದಿ ನೇತೃತ್ವದಲ್ಲಿ ವಿಶ್ವಬಂಧುಗಳನ್ನು ಪಡೆದಿದೆ. ನೆಹ್ರೂ ಪಾರುಪತ್ಯದಲ್ಲಿ ಬರೀ ವೈರಿ ಸೃಷ್ಟಿ. ಈಗ ಬೇಕಾದೀತು, ಈ ಒಳವೈರಿ ಪಡೆಯ ನಿಗ್ರಹ. ಅದರ ನಾನಾ ಮುಖ ನೋಡಿದ್ದೀರಿ-‘ಮೀ ಟೂ’ ಗ್ಯಾಂಗು, ನಗರ ನಕ್ಸಲರು, ‘ಬುದ್ಧಿಜೀವಿಗಳು’, ಪ್ರತಿಪಕ್ಷಗಳ ಕಿರುಚಾಡುವವರು, ರಾಷ್ಟ್ರದ್ರೋಹಿಗಳ ಪರವಾದ ವಕೀಲರು, ಇಂಥವರ ಸ್ಮಾರಕಗಳು-ಇವೆಲ್ಲಕ್ಕೆ ಒಂದು ಪೂರ್ಣವಿರಾಮ ಬೇಕು. ಅಂದು ಜನಮೇಜಯ ಒಂದು ‘ಸರ್ಪಯಾಗ’ ಮಾಡಿದ. ಅದು ಟಟ್ಝಜಿಠಿಜ್ಚಿಚ್ಝ ಠಚ್ಚ್ಟ್ಛ್ಚ ಆಗಿ, ಶತ್ರುನಿಮೂಲನ ಸಾಧಕವಾಯ್ತು. ಈ ಬಗ್ಗೆ ಇದೀಗ ಒಂದು ಕಾದಂಬರಿ ಬರೆದು ಮುಗಿಸಿದ್ದೇನೆ-ಅಲ್ಲಿ ಕಾಣಿರಿ ಇಂದಿನ ಧ್ವನಿಗಳನ್ನು. ಣಡಛ್ಟಿಠಿಟ್ಞಛಿಠ. ಜಪಾನೆಲ್ಲಿ? ನಾವೆಲ್ಲಿ?
(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)