

Kidney Stones: ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳು. ಇವು ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ ಮೂತ್ರದ ಮೂಲಕ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತವೆ. ಸರಿಯಾದ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸದಿರುವುದು ಕಿಡ್ನಿ ಮೇಲಿನ ಹೊರೆಯನ್ನು ದುಪ್ಪಟ್ಟಾಗಿಸುತ್ತದೆ. ಇದು ಹಲವು ರೀತಿಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಇದನ್ನೂ ಓದಿ: 4ನೇ ಟೆಸ್ಟ್ಗೆ ಇಂಗ್ಲೆಂಡ್ ಮಾಸ್ಟರ್ ಪ್ಲಾನ್: ಟಿ20 ಸ್ಪೆಷಲಿಸ್ಟ್ ಸೇರ್ಪಡೆ, ಹೀಗಿದೆ ಆಂಗ್ಲರ ಅಂತಿಮ ತಂಡ! IND vs ENG ಉದಾ: ಕಲ್ಲುಗಳು, ಸೋಂಕುಗಳು, ದ್ರವದ ಧಾರಣ ಮತ್ತು ಕಿಡ್ನಿ ವೈಫಲ್ಯಗಳು ಸೇರಿವೆ. ಅಷ್ಟಕ್ಕೂ ಇಂತಹ ಸಮಸ್ಯೆಗಳನ್ನು ಮನೆಯಲ್ಲೇ ನಿವಾರಿಸಿಕೊಳ್ಳುವುದು ಹೇಗೆ? ಎಂಬುದಕ್ಕೆ ಇಲ್ಲಿವೆ ನೋಡಿ ಒಂದಷ್ಟು ಉಪಯುಕ್ತ ಸಲಹೆಗಳು. ಮೇಲಿನಂತೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಆರಂಭಿಕ ಹಂತಗಳಲ್ಲಿ ಪತ್ತೆಯಾದರೆ, ಅದನ್ನು ನೈಸರ್ಗಿಕ ವಿಧಾನಗಳ ಮೂಲಕ ತಪ್ಪಿಸಬಹುದು. ಆದರೆ, ಪತ್ತೆಹಚ್ಚುವುದು ಅತೀ ಮುಖ್ಯ.
1. ಹೆಚ್ಚು ಪ್ರಮಾಣದಲ್ಲಿ ನೀರು: ದೇಹವು ಸಾಕಷ್ಟು ಹೈಡ್ರೇಟೆಡ್ ಆಗಿರಬೇಕು. ದಿನಕ್ಕೆ ಕನಿಷ್ಠ 8ರಿಂದ 10 ಗ್ಲಾಸ್ ನೀರು ಕುಡಿಯುವುದರಿಂದ ಕಿಡ್ನಿಯಲ್ಲಿನ ವಿಷವನ್ನು ಹೊರಹಾಕಲು ಇದು ಸಹಾಯ ಮಾಡುತ್ತದೆ. ಅಧಿಕ ನೀರು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಲು ಸಹಕಾರಿ.
2. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಳಕೆ: ನಿಮ್ಮ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸುವುದು ಒಳಿತು. ಇವುಗಳಲ್ಲಿರುವ ಆಲಿಸಿನ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಮೂತ್ರಪಿಂಡದ ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈರುಳ್ಳಿ ಮೂತ್ರದ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ನಿರ್ವಿಶೀಕರಣಕ್ಕೆ ಸಹಕಾರಿ.
3. ಅರಿಶಿಣ: ಅರಿಶಿನವು ನೈಸರ್ಗಿಕ ಪ್ರತಿಜೀವಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ ಅಂಶ ಉರಿಯೂತ ಮತ್ತು ಸೋಂಕನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ. ಇದು ಮೂತ್ರನಾಳದ ಸೋಂಕುಗಳನ್ನು (UTIs) ನಿಯಂತ್ರಿಸುತ್ತದೆ.
4. ನಿಂಬೆ ರಸ: ನಿಂಬೆ ರಸದಲ್ಲಿರುವ ಸಿಟ್ರಿಕ್ ಆಮ್ಲವು ಮೂತ್ರದಲ್ಲಿನ ಕ್ಯಾಲ್ಸಿಯಂ ಅನ್ನು ಸಮತೋಲನಗೊಳಿಸುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ. ದಿನಕ್ಕೆ ಒಂದರಿಂದ ಎರಡು ಗ್ಲಾಸ್ ನಿಂಬೆ ರಸವನ್ನು ಕುಡಿಯುವುದು ಒಳ್ಳೆಯದು.
5. ಕಲ್ಲಂಗಡಿ ಮತ್ತು ಸೌತೆಕಾಯಿ: ಕಲ್ಲಂಗಡಿ ಮತ್ತು ಸೌತೆಕಾಯಿ ರಸಗಳು ಮೂತ್ರ ವಿಸರ್ಜನೆಯನ್ನು ಹೆಚ್ಚಿಸುತ್ತವೆ. ಇದು ಮೂತ್ರಪಿಂಡಗಳಿಂದ ಲವಣಗಳು ಮತ್ತು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕಲ್ಲಂಗಡಿ ಶೇ.90ಕ್ಕಿಂತ ಹೆಚ್ಚು ನೀರನ್ನು ಹೊಂದಿರುವುದರಿಂದ, ಇದು ಕಿಡ್ನಿಗೆ ಉತ್ತಮ.
ಇದನ್ನೂ ಓದಿ: ಜಗದೀಪ್ ಧನಕರ್ ದಿಢೀರ್ ರಾಜೀನಾಮೆ ಬಳಿಕ ಉಪರಾಷ್ಟ್ರಪತಿ ಹುದ್ದೆಯ ರೇಸ್ನಲ್ಲಿ ಯಾರಿದ್ದಾರೆ? Vice President6. ಉಪ್ಪು ಮತ್ತು ಸಂಸ್ಕರಿಸಿದ ಆಹಾರ ಕಡಿತ: ಅತಿಯಾದ ಉಪ್ಪು ಸೇವನೆಯು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಉಪ್ಪು ಹೆಚ್ಚಿರುವ ತಿಂಡಿಗಳು, ಫ್ರೀಜರ್ ಆಹಾರಗಳು ಮತ್ತು ಜಂಕ್ ಫುಡ್ ಅನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕು.
7. ವ್ಯಾಯಾಮ: ವಾಕಿಂಗ್ ಮತ್ತು ಯೋಗದಂತಹ ಲಘು ವ್ಯಾಯಾಮಗಳು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಬಹುದು. ಅರ್ಥಮತ್ಸ್ಯೇಂದ್ರಾಸನ ಮತ್ತು ಭುಜಂಗಾಸನದಂತಹ ಯೋಗ ಆಸನಗಳು ಮೂತ್ರಪಿಂಡದ ಕಲ್ಲುಗಳ ನಿವಾರಣೆಗೆ ಉತ್ತಮ.