ಮೇ 10 ಮತದಾನದ ದಿನ ಅಲ್ಲ… ಭ್ರಷ್ಟಾಚಾರ ಬಡಿದೋಡಿಸುವ ದಿನ; ಡಿ.ಕೆ.ಶಿವಕುಮಾರ್

D K Shivkumar
Published on

ಬೆಂಗಳೂರು: ಮೇ 10ರಂದು ಚುನಾವಣಾ ದಿನಾಂಕ ಪ್ರಕಟವಾಗಿದ್ದು, ರಾಜ್ಯಕ್ಕೆ ಹೊಸ ಸರ್ಕಾರ ತರಲು ದಿನಾಂಕ ಘೋಷಣೆ ‌ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ,ಶಿವಕುಮಾರ್ ಹೇಳಿದ್ದಾರೆ. ಬಹಳ ಹಿಂದೆಯೇ ನೀತಿ ಸಂಹಿತೆ ಬರಬೇಕಿತ್ತು. ಬಿಜೆಪಿ ಸರ್ಕಾರಗಳು ಅಧಿಕಾರ ದುರುಪಯೋಗ ಮಾಡಿಕೊಂಡರು. ಆದರೂ ಚುನಾವಣಾ ದಿನಾಂಕ ಘೋಷಣೆ ಆಗಿದೆ ಎಂದರು. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಕಲ್ಲೆಸೆದರೆ 5 ವರ್ಷ ಜೈಲು! ಕಠಿಣ ಕ್ರಮಕ್ಕೆ ಮುಂದಾದ ರೈಲ್ವೇ ಇಲಾಖೆ

ಡಿಕೆಶಿ ಮಾತನಾಡುತ್ತಾ, ಮೇ 10 ಮತದಾನದಿನ ಅಲ್ಲ, ಭ್ರಷ್ಟಾಚಾರ ಬಡಿದೊಡಿಸುವ ದಿನ. ಹೊಸ ನಾಡು ಕಟ್ಟುವಂತ ದಿನ. ನವ ಕರ್ನಾಟಕದ ಹೊಸ ದಿಕ್ಕು ಕೊಡುವ ದಿನ. ಡಬಲ್ ಇಂಜಿನ್ ಫೇಲ್ ಆಗಿದೆ, ಹೊಸ ಇಂಜಿನ್ ತಾಯರಾಗುತ್ತದೆ. ಮೇ 10 ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಜನರ ಭವಿಷ್ಯ ನಿರ್ಮಾಣ ಮಾಡುವ ದಿನ ಎಂದು ಹೇಳಿದರು.

ಗುಜರಾತಿನ ಇವಿಎಂ ಬೇಡ ಎಂದು ನಾವು ಪತ್ರ ಬರೆದಿದ್ದೆವು. ಈಗ ನಮ್ಮನ್ನು ‌ಕರೆದಿದ್ದು, ಚುನಾವಣಾ ಆಯೋಗದೊಂದಿಗೆ ಮಾತನಾಡುತ್ತೇವೆ. ಇವಿಎಂ ಬಗ್ಗೆ ಕಾರ್ಯಕರ್ತರಿಗೆ ಅರಿವು ಮೂಡಿಸುತ್ತೇವೆ. ಹೊಸ ಇವಿಎಂಗೆ ಸ್ವಾಗತ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ದಕ್ಷಿಣ ರೈಲ್ವೇ ಫೇಸ್​ಬುಕ್ ಪೇಜ್ ಹ್ಯಾಕ್! ಕಾರ್ಟೂನ್ ಫೋಟೋ ಅಪ್ಲೋಡ್ ಮಾಡಿದ ಸೈಬರ್ ಕಳ್ಳರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net