ನನ್ನದೂ ಹಿಟ್ ಆ್ಯಂಡ್ ರನ್ ಜಾಯಮಾನವಲ್ಲ; ಮಾಜಿ ಸಿಎಂ ಎಚ್​ಡಿಕೆ ಆರೋಪಕ್ಕೆ ಡಿ.ಕೆ. ಶಿವಕುಮಾರ್​ ತಿರುಗೇಟು

Dk HDK
Published on

ಕಲಬುರಗಿ: ವರ್ಗಾವಣೆ ದಂಧೆ ಸೇರಿದಂತೆ ಇನ್ಯಾವುದೇ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಿದ್ದರೆ ನಾವೇ ತನಿಖೆ ಮಾಡಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಕಲಬುರಗಿಯಲ್ಲಿ ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್​ ಬೇರೆಯವರನ್ನು ಹೆದರಿಸಿದಂತೆ ನನ್ನನ್ನು ಬೆದರಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಮಾಜಿ ಸಿಎಂ ಎಚ್​ಡಿಕೆ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾಜಿ ಸಿಎಂ ಎಚ್​ಡಿಕೆ ಪೆನ್​ಡ್ರೈವ್​ ಬಿಡುಗಡೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರ ಬಳಿ ಯಾವುದೇ ದಾಖಲಿಗಳಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ ನಾವೆ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ.

Dk HDK

ಬೇರೆಯವರನ್ನು ಹೆದರಿಸಿದಂತೆ ನನ್ನನ್ನು ಬೆದರಿಸಿದರೆ ಯಾವುದೇ ಪ್ರಯೋಜನವಿಲ್ಲ. ನಾನು ಯಾವುದಕ್ಕೂ ಜಗ್ಗುವುದಿಲ್ಲ. 1975ರಿಂದಲೂ ಈ ರೀತಯ ಅನೇಕ ಬಾಂಬ್​ಗಳನ್ನು ನೋಡಿದ್ದೇನೆ ಎಂದು ಮಾಜಿ ಸಿಎಂ ಎಚ್​ಡಿಕೆ ಆರೋಪಕ್ಕೆ ಟಾಂಗ್​ ಕೊಟ್ಟಿದ್ದಾರೆ.

ಈ ಜನ್ಮದಲ್ಲೂ ಡಿಕೆಶಿ ಅಂತ ತಮ್ಮಾ ಬೇಡ ಎಂಬ ಎಚ್​ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಅವರ ನುಡಿಮುತ್ತುಗಳನ್ನು ಬಹಳ ಸಂತೋಷದಿಂದ ಸ್ವೀಕಾರ ಮಾಡಿದ್ದೀನಿ. ನಾಳೆ ಅಥವಾ ನಾಡಿದ್ದು ಅವರ ಹೇಳಿಕೆ ಹಾಗೂ ಪ್ರಶ್ನೆಗಳಿಗೆ ಉತ್ತರ ಕೊಡೋಣ. ನನ್ನದೂ ಹಿಟ್ ಆ್ಯಂಡ್ ರನ್ ಜಾಯಮಾನವಲ್ಲ ಎಂದು ಮಾಜಿ ಸಿಎಂ ಎಚ್​ಡಿಕೆ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ತಿರುಗೇಟು ನೀಡಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net