ಗುರುಪುರ: ದೀಪಾವಳಿ ಹಬ್ಬದ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಮತ್ತು ಪೊಳಲಿ ಟೈಗರ್ಸ್ ತಂಡದ ವತಿಯಿಂದ 5ನೇ ವರ್ಷದ ಮೂರು ದಿನಗಳ ದೀಪೋತ್ಸವ, ಕುಣಿತ ಭಜನೆ ಶುಕ್ರವಾರ ಆರಂಭಗೊಂಡಿತು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳೆಪಾಡಿಗುತ್ತು, ಪ್ರಶಾಂತ್ ಕಾಜವ ಮತ್ತಿತರ ಗಣ್ಯರು ದೀಪೋತ್ಸವ ಉದ್ಘಾಟಿಸಿದರು.
ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ಉದ್ಯಮಿ ಪ್ರಕಾಶ್ ಕಾಜವ, ಪುರಲ್ದಪ್ಪೆನ ಮೋಕೆದ ಬೊಳ್ಳಿಲು, ಪೊಳಲಿ ಟೈಗರ್ಸ್ ತಂಡದ ಸಂಸ್ಥಾಪಕ ಸಂತೋಷ್ ಪೊಳಲಿ, ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್, ವಿಜೇಶ್ ನಾಯ್ಕ ಮುಡಿಪು, ವೆಂಕಟೇಶ್ ನಾವಡ, ದೇವಸ್ಥಾನದ ಅರ್ಚಕರಾದ ನಾರಾಯಣ ಭಟ್, ಪದ್ಮನಾಭ ಭಟ್, ಅನಂತ ಭಟ್, ಆನುವಂಶಿಕ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ಆನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಆನುವಂಶಿಕ ಮೊಕ್ತೇಸರ ಮಾಧವ ಭಟ್ ಮತ್ತಿತರರು ಉಪಸ್ಥಿತರಿದ್ದರು.