ಮಾಡೆಲ್​ ದಿವ್ಯಾ ಪಹುಜಾ ಹತ್ಯೆಗೈದಿದ್ದ ಆರೋಪಿ ವಿಮಾನ ನಿಲ್ದಾಣದಲ್ಲಿ ಬಂಧನ

model
Published on

ಪಶ್ಚಿಮ ಬಂಗಾಳ: ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಕೊಲೆ ಮತ್ತೊಬ್ಬ ಆರೋಪಿಯನ್ನು ಪಶ್ಚಿಮ ಬಂಗಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಾಜಿ ಮಾಡೆಲ್ ಪಹುಜಾ ಶವವನ್ನು ಮತ್ತೊಬ್ಬ ಆರೋಪಿ ರವಿ ಬಾಂದ್ರಾ ಜತೆ ವಿಲೇವಾರಿ ಮಾಡಿದ್ದ ಬಾಲ್​ರಾಜ್ ಗಿಲ್ ಗುರುವಾರ ಸಂಜೆ ವಿಮಾನ ನಿಲ್ದಾಣದಲ್ಲಿ ವಿಮಾನ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ ಎನ್ನಲಾಗಿದೆ.

ರವಿ ಬಾಂದ್ರಾ ಪರಾರಿಯಾಗಿದ್ದು, ಆತನ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 2 ರಂದು ಮಾಡೆಲ್​ ದಿವ್ಯಾ ಪಹುಜಾ ಅವರನ್ನು ಐದು ಜನರು ಹೋಟೆಲ್ ಸಿಟಿ ಪಾಯಿಂಟ್‌ಗೆ ಕರೆದೊಯ್ದು ಕೊಠಡಿ ಸಂಖ್ಯೆ 111 ರೊಳಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮಾಜಿ ಮಾಡೆಲ್‌ನ ದೇಹ ಇನ್ನೂ ಪತ್ತೆಯಾಗಿಲ್ಲ.

ಬಿಎಂಡಬ್ಲ್ಯು ಕಾರಿನಲ್ಲಿ ಶವವನ್ನು ಕೊಂಡೊಯ್ದಿದ್ದ ಬಾಲರಾಜ್ ಸಿಂಗ್ ಮತ್ತು ರವಿ ಬಂಗಾ ಶವವನ್ನು ಘಗ್ಗರ್ ನದಿಯಲ್ಲಿ ಎಸೆದಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಡೈವರ್‌ಗಳ ಸಹಾಯದಿಂದ ಮೃತದೇಹವನ್ನು ನದಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.ಪ್ರಕರಣದ ಪ್ರಮುಖ ಆರೋಪಿಗಳಾದ ಅಭಿಜಿತ್ ಸಿಂಗ್, ಹೇಮರಾಜ್ ಮತ್ತು ಓಂಪ್ರಕಾಶ್ ಅವರನ್ನು ಪೊಲೀಸರು ಈಗಾಗಲೇ ಬಂಧಿಸಲಾಗಿದೆ.

ಪಹುಜಾ ತನ್ನ ಫೋನ್‌ನಲ್ಲಿ ಅಭಿಜಿತ್ ಸಿಂಗ್ ಅವರ ಕೆಲವು ಅಶ್ಲೀಲ ವೀಡಿಯೊಗಳನ್ನು ಹೊಂದಿದ್ದರು, ಅದನ್ನು ಡಿಲಿಟ್​ ಮಾಡಲು ಆಕೆ ನಿರಾಕರಿಸಿದ್ದಳು. ಅಭಿಜೀತ್ ಸಿಂಗ್ ಶವದೊಂದಿಗೆ ಕಾರನ್ನು ಹೋಟೆಲ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿ ಬಲರಾಜ್ ಗಿಲ್‌ಗೆ ನೀಡಿದ್ದ, ಪಂಜಾಬ್‌ನ ಪಟಿಯಾಲಾದ ಬಸ್ ನಿಲ್ದಾಣದಲ್ಲಿ ಗುರ್ಗಾಂವ್ ಪೊಲೀಸರು ಜ.5 ರಂದು ಬಿಎಂಡಬ್ಲ್ಯು ಕಾರನ್ನು ಪತ್ತೆ ಮಾಡಿದ್ದರು.

ಗುರುಗ್ರಾಮದ ಭೂಗತ ಪಾತಕಿ ಸಂದೀಪ್ ಗಡೋಲಿ ನಕಲಿ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಿಸಿ ದಿವ್ಯಾ ಪಹುಜಾಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಸ್ವಲ್ಪ ದಿನಗಳ ಹಿಂದಷ್ಟೇ ಜಾಮೀನಿನ ಮೂಲಕ ಹೊರಬಂದಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಹೋಟೆಲ್ ಮಾಲೀಕ ಅಭಿಜಿತ್, ಕೆಲಸಗಾರರಾದ ಹೇಮರಾಜ್, ಓಂ ಪ್ರಕಾಶ್​ನನ್ನು ಬಂಧಿಸಲಾಗಿದೆ.

ಪ್ರಮುಖ ಶಂಕಿತರಾದ ಆರೋಪಿ ಅಭಿಜೀತ್ ಸಿಂಗ್, ಹೊಟೇಲ್ ಮಾಲೀಕ ಹಾಗೂ ಇನ್ನಿಬ್ಬರನ್ನು ಹೇಮರಾಜ್ ಮತ್ತು ಓಂಪ್ರಕಾಶ್ ಎಂದು ಗುರುತಿಸಲಾಗಿದ್ದು, ಈವರೆಗೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net