

Murder: ಡಿವೋರ್ಸ್ ವಿವಾದ ಹಿನ್ನೆಲೆ ನನ್ನ ಹಣವನ್ನೆಲ್ಲಾ ತಿಂದಿದ್ದೀಯಾ ಎಂದು ನಡು ಮಾರುಕಟ್ಟೆಯ ಜನನಿಬಿಡ ಪ್ರದೇಶದಲ್ಲೇ ಪತ್ನಿ ಮೇಲೆ ಗುಂಡು ಹಾರಿಸಿ ಪತಿ ಕೊಂದ ಘಟನೆ ಉತ್ತರ ಪ್ರದೇಶದ ಗೋರಖ್ಪುರದ ನಡೆದಿದೆ ಎಂದು ಶುಕ್ರವಾರ(ಸೆ. 05) ವರದಿಯಾಗಿದೆ.
35 ವರ್ಷದ ಪತ್ನಿ ಮಮತಾ ಚೌಹಾನ್ ಕೊಲೆಯಾದ ಮಹಿಳೆ. ವಿಶ್ವಕರ್ಮ ಚೌಹಾನ್ ಕೊಲೆ ಮಾಡಿದ ಆರೋಪಿ ಪತಿ. 13 ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದು, 13 ವರ್ಷದ ಒಬ್ಬ ಮಗಳಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಪೊಲೀಸರ ಮುಂದೆ ತಾನು ಪತ್ನಿ ಕೊಲೆ ಮಾಡಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ, ಅವಳು ನನ್ನ ಹಣವನ್ನು ತಿಂದು ತೇಗಿದ್ದಳು ಎಂದು ಹೇಳಿದ್ದಾನೆ.
ಬುಧವಾರ ಸಂಜೆ 7.30 ಗಂಟೆ ಸುಮಾರಿಗೆ ನಡೆದಿದೆ. ದಂಪತಿಗಳು ಫೋಟೋ ಸ್ಟುಡಿಯೋದ ಹೊರಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದರು. ಬಳಿಕ ಪತಿ ಪಿಸ್ತೂಲ್ ಹೊರತೆಗೆದು ಎರಡು ಗುಂಡು ಹಾರಿಸಿದ್ದು, ಅದರಲ್ಲಿ ಒಂದು ಪತ್ನಿಯ ಹಣೆ ಮತ್ತು ತೊಳಿಗೆ ಗುಂಡು ತಗುಲಿದೆ ಎನ್ನಲಾಗಿದೆ. ತಕ್ಷಣಾ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ರು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಮೃತ ಪತ್ನಿ ಮಮತಾ, 13 ವರ್ಷದ ಮಗಳೊಂದಿಗೆ ಪತಿಯಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ಇದೇ ವೇಳೆ ವಿಚ್ಚೇದನ ಪ್ರಕ್ರಿಯೆ ಮುಂದುವರಿಯುವ ಮೊದಲು ಮಕ್ಕಳ ಪೋಷಣೆ ಮತ್ತು ಜಮೀನನ್ನ ನನ್ನ ಹೆಸರಿಗೆ ವರ್ಗಾಯಿಸುವಂತೆ ಒತ್ತಾಯಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)