

ಔರಾದ್: ಅಕ್ರಮವಾಗಿ ಗಾಂಜಾ ಸಾಗಿಸಲು ಬಸ್ಗಾಗಿ ಕಾದು ಕುಳಿತಿದ್ದ ಮೂವರನ್ನು ಚಿಂತಾಕಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ 4.20 ಲಕ್ಷ ರೂ. ಮೌಲ್ಯದ 35ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಚಿಂತಾಕಿ ಹಾಗೂ ತೆಲಂಗಾಣ ಗಡಿಯ ಕಂಗಟಿ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ತೆಲಂಗಾಣದ ಜುಕ್ಕಲ್ ಹತ್ತಿರದ ಘೂಳಾ ತಾಂಡಾದ ಪರಶುರಾಮ ಜಾಧವ್(42), ಸಂಗಾರೆಡ್ಡಿ ಜಿಲ್ಲೆ ದೇಗಲವಾಡಿ ತಾಂಡಾದ ಅಶೋಕ ರಾಠೋಡ್ (34), ದೇಗಲವಾಡಿ ತಾಂಡಾದ ನಾಮದೇವ್ ಜಾಧವ್ (28) ಅವರನ್ನು ಬಂಧಿಸಲಾಗಿದೆ.
ಗಾಂಜಾ ಸಾಗಿಸಲು ಇವರು ಬಸ್ಗಾಗಿ ಕಾಯುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಿಎಸ್ಪಿ ಡಾ.ದೇವರಾಜ್, ತಹಸೀಲ್ದಾರ್ ಎಂ.ಚಂದ್ರಶೇಖರರಾವ್, ಪಿಎಸ್ಐಗಳಾದ ಮಂಜುನಾಥ ರೆಡ್ಡಿ, ಪ್ರಭಾಕರ್ ಪಾಟೀಲ್, ಸುವರ್ಣ, ಪೇದೆಗಳಾದ ಪ್ರಕಾಶ, ಅನೀಲ, ಗುರುಲಿಂಗ, ಮಲ್ಲಮ್ಮ ಬಿರಾದಾರ ಇದ್ದರು. ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ನಾಗೇಶ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.