₹ 4.68 ಲಕ್ಷ ಮದ್ಯ ಜಪ್ತಿ

police - Copy
Published on

ಬೀದರ್: ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 4.68 ಲಕ್ಷ ರೂ. ಮೌಲ್ಯದ ಮದ್ಯವನ್ನು ಭಾನುವಾರ ರೌಡಿ ನಿಗ್ರಹ ದಳದ ತಂಡ ಜಪ್ತಿ ಮಾಡಿದೆ.

ನಿಗ್ರಹ ದಳದ ಅಧಿಕಾರಿ, ಗಾಂಗಂಜ್ ಠಾಣೆ ಸಿಪಿಐ ಹನುಮರಡ್ಡೆಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಲ್ಲಿನ ರಾಮನಗರದ ಮನೆಯಲ್ಲಿ ಸಂಗ್ರಹಿಸಿದ 4,68,738 ರೂ. ಮೌಲ್ಯದ ವಿವಿಧ ಕಂಪನಿಯ 750 ಎಂ.ಎಲ್‌ ನ 153 ಸರಾಯಿ ಬಾಟಲ್ ಗಳನ್ನು ಜಪ್ತಿ ಮಾಡಿಕೊಂಡು, ರಾಜಕುಮಾರ ಎಂಬಾತನನ್ನು ಬಂಧಿಸಿದ್ದಾರೆ. ಹೋಳಿ ನಿಮಿತ್ತ ಅಕ್ರಮವಾಗಿ ಮಾರಾಟಕ್ಕೆ ಮದ್ಯ ಸಂಗ್ರಹಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ತಂಡದ ಕಾರ್ಯಾಚರಣೆಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ. ತಂಡದಲ್ಲಿ ನವೀನ್, ಸಂಜುಕುಮಾರ, ರಾಜಕುಮಾರ, ದೀಪಕ ಇದ್ದರು. ಗಾಂಧಿಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net