₹ 22 ಲಕ್ಷ ಮೊತ್ತದ ಉಪಕರಣ ಹಸ್ತಾಂತರ

IMG-20200928-WA0005
Published on

ಬೀದರ್: ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯ 32 ಫಾರ್ಮಾ ಮತ್ತು ಕೆಮಿಕಲ್ ಘಟಕಗಳು 22 ಲಕ್ಷ ರೂ. ಮೊತ್ತದ ವಿವಿಧ ಆಧುನಿಕ ಉಪಕರಣಗಳನ್ನು ಇಲ್ಲಿನ ಬ್ರಿಮ್ಸ್ ಆಸ್ಪತ್ರೆಗೆ ನೀಡಿವೆ.

ಫಾರ್ಮಾ ಮತ್ತು ಕೆಮಿಕಲ್ ಘಟಕಗಳ ಪ್ರಮುಖರು ಜಿಲ್ಲಾ ಕೈಗಾರಿಕಾ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಅವರ ಮೂಲಕ ಈ ಉಪಕರಣಗಳನ್ನು ಸೋಮವಾರ ಬ್ರಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದರು.

ಸತ್ಯದೀಪ ಫಾರ್ಮಾ, ಸಾಯಿಲೈಫ್ ಸೈನ್ಸ್ ನಿಂದ ತಲಾ 3.70 ಲಕ್ಷ ರೂ. ಮೊತ್ತದಲ್ಲಿ ಎರಡು ಪೋರ್ಟಬಲ್ ಎಕ್ಸ್-ರೇ ಮಷೀನ್ ನೀಡಲಾಯಿತು. ಕೋರ್ವಿನ್ ಕೆಮಿಕಲ್ 2 ಲಕ್ಷ ರೂ. ಮೊತ್ತದ ಇಸಿಜಿ ಯಂತ್ರಗಳು, ಶ್ರೀವನ್ ಫಾರ್ಮಾದಿಂದ 1.20 ಲಕ್ಷ ರೂ.ಗಳ ಪ್ಯಾರಾಸಿಟಾಮ್ಲ್ ಗುಳಿಗೆ, ಹ್ಯಾಂಡ್ ಸ್ಯಾನಿಟೈಸರ್, ಹಮನಾಬಾದ್ ನ ಆರ್ಕೆ ವತಿಯಿಂದ ಪಿಪಿಇ ಕಿಟ್ಸ್, ಬ್ಯಾಟರಿ ಸ್ಪ್ರೇಯರ್ ವಿತ್ ಬ್ಲೌವೆಡರ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಕೊಡಲಾಯಿತು. ಕೆಮಿಕಲ್ ರಿ ಏಜೆಂಟ್ಸ್ ಕಿಟ್ಸ್ ಖರೀದಿಗಾಗಿ ಫಾರ್ಮಾ ಕಂಪನಿಗಳಿಂದ 9.35 ಲಕ್ಷ ರೂ. ನೀಡಲಾಯಿತು.

ಜಿಲ್ಲಾಧಿಕಾರಿ ರಾಮಚಂದ್ರನ್ ಮಾತನಾಡಿ, ವಿಪತ್ತಿನ ಸಂದರ್ಭ ಎದುರಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಕೊರಿದರು. ವಿವಿಧ ಕಂಪನಿಗಳು ಉಪಕರಣ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ, ಉಪ ನಿರ್ದೇಶಕ ನಾಗಪ್ಪರಡ್ಡಿ, ಡಿಎಚ್ಒ ಡಾ. ವಿ.ಜಿ.ರಡ್ಡಿ, ಫಾರ್ಮಾ ಅಸೋಸಿಯೇಷನ್ ಅಧ್ಯಕ್ಷ ದೇವೇಂದ್ರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net