ಮಾಜಿ ಪ್ರಿಯಕರನಿಂದ ಯುವತಿ, ಗೆಳೆಯನ ಮೇಲೆ ಹಲ್ಲೆ, ದಾಂಧಲೆ

attack
ಹೋಟೆಲ್‌ನಲ್ಲಿ ನಡೆದ ದಾಳಿಯ ಸಿಸಿಟಿವಿ ಫೂಟೇಜ್
Published on

ಮಂಗಳೂರು: ತನ್ನ ಮಾಜಿ ಪ್ರಿಯತಮೆ ಇನ್ನೋರ್ವನ ಜೊತೆ ಇರುವುದರಿಂದ ಸಿಟ್ಟಿಗೆದ್ದ ಯುವಕನೋರ್ವ ತನ್ನ ತಂಡದೊಂದಿಗೆ ಆಕೆಯಿದ್ದ ಹೋಟೆಲ್‌ಗೆ ನುಗ್ಗಿ ದಾಂಧಲೆ ಎಸಗಿ ಚೂರಿಯಿಂದ ಓರ್ವನನ್ನು ಇರಿದು ಗಾಯಗೊಳಿಸಿರುವ ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ನಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿ ಈಗ ಬಯಲಾಗಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಬೆಂದೂರು ಸಮೀಪದಲ್ಲಿರುವ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ.
ಜ.೩೦ರಂದು ಮಧ್ಯಾಹ್ನ ಘಟನೆ ನಡೆದಿದೆ. ಯುವತಿಯ ಈಗಿನ ಗೆಳೆಯ ಪ್ರತೀಕ್ಷ್‌ ಎಂಬಾತ ಚೂರಿಯ ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಯುವತಿ ಮಧ್ಯಾಹ್ನ ತನ್ನ ಮಿತ್ರರೊಂದಿಗೆ ಹೋಟೆಲ್‌ನಲ್ಲಿ ಆಹಾರ ಸೇವಿಸುತ್ತಿರುವಾಗ ಆಗಮಿಸಿದ ತ್ರಿಶೂಲ್‌ ಮತ್ತು ಆತನ ಮಿತ್ರರು ಪ್ರತೀಕ್ಷ್‌ ಹಾಗೂ ಇತರರ ಮೇಲೆ ಎರಗಿದ್ದಾರೆ, ತ್ರಿಶೂಲ್‌ ತನ್ನ ಮಾಜಿ ಪ್ರಿಯತಮೆಯ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ. ಪ್ರತೀಕ್ಷ್‌ನ ದೇಹದ ನಾಲ್ಕು ಕಡೆಗೆ ಚೂರಿಯ ಇರಿತದ ಗಾಯಗಳಾಗಿವೆ.
ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net