

ಯಾದಗಿರಿ : ಅಮೃತ ಮಹೋತ್ಸವ ಯೋಜನೆಯಡಿ ಜಿಲ್ಲೆಯಲ್ಲಿ ಪುನಶ್ಚೇತನಗೊಂಡ ೮೬ ಅಮೃತ ಸರೋವರಗಳಲ್ಲಿ ಆ.೧೫ರಂದು ರಾಷ್ಟç ಧ್ವಜಾರೋಹಣ ನೆರವೇರಿಸುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಪನ್ವಾರ್ ತಿಳಿಸಿದ್ದಾರೆ.
೭೬ನೇ ಸ್ವಾತಂತ್ರೊÈÃತ್ಸವ ನಿಮಿತ್ತ ಅಮೃತ ಸರೋವರಗಳಲ್ಲಿ ಧ್ವಜಾರೋಹಣ ಕರ‍್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ಸುತ್ತೋಲೆಯಂತೆ ನರೇಗಾ ಮಿಷನ್ ಅಮೃತ ಸರೋವರ ಅಭಿಯಾನದಡಿ ಮಳೆ ನೀರು ಸಂರಕ್ಷಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಹಿನ್ನೆಲೆಯಲ್ಲಿ ಅಳಿವಿನಂಚಿನಲ್ಲಿದ್ದ ಶಹಾಪುರ ತಾಲೂಕಿನ ೨೨, ಸುರಪುರ ೨೫, ಯಾದಗಿರಿ ೧೧, ವಡಗೇರಾ ೬, ಗುರುಮಠಕಲ್ ೮ ಹಾಗೂ ಹುಣಸಗಿ ತಾಲೂಕಿನ ೧೪ ಸೇರಿ ೮೬ ಗ್ರಾಮೀಣ ಪ್ರದೇಶದ ಕೆರೆ, ಕಲ್ಯಾಣಿ ಮತ್ತು ಗೋಕಟ್ಟೆಗಳನ್ನು ಪುಶ್ಚೇತನಗೊಳಿಸಿ ಅಮೃತ ಸರೋವರಗಳಾಗಿ ನಿರ್ಮಿಸಲಾಗಿದೆ ಎಂದರು.
ಆ.೧೫ರAದು ನನ್ನ ಮಣ್ಣು ನನ್ನ ದೇಶ ಅಭಿಯಾನ ನಿಮಿತ್ತ ಭೂತಾಯಿಗೆ ನಮನ ಮತ್ತು ವೀರಯೋಧರಿಗೆ ವಂದನೆ ಸಲ್ಲಿಸುವುದಕ್ಕಾಗಿ ಸ್ವಾತಂತ್ರö್ಯ ಹೋರಾಟಗಾರರು ಇಲ್ಲವೆ ಅವರ ಕುಟುಂಬಸ್ಥರು, ಹುತಾತ್ಮರ ಕುಟುಂಬಸ್ಥರು ಹಾಗೂ ಹಿರಿಯ ನಾಗರಿಕರಿಂದ ಪೂರ್ಣಗೊಂಡ ಅಮೃತ ಸರೋವರ ಸ್ಥಳಗಳಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಅಮೃತ ಸರೋವರ ಸ್ಥಳಗಳಲ್ಲಿ ಆಯೋಜಿಸಿರುವ ಕರ‍್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಸ್ವಸಹಾಯ ಸಂಘದ ಸದಸ್ಯರು, ಯುವಕರು, ಕೆರೆ ನೀರು ಬಳಕೆದಾರರ ಸಂಘದ ಸದಸ್ಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಚಟುವಟಿಕೆ ಹಮ್ಮಿö್ಮಕೊಂಡು ಜಲ ಸಂರP್ಷÀಣೆ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಧ್ವಜಾರೋಹಣ ನಿಮಿತ್ತ ಗ್ರಾಮಸ್ಥರಿಗಾಗಿ ತಿರಂಗಾ ಯಾತ್ರೆ ಆಯೋಜಿಸಿದ್ದು, ಸಮುದಾಯದ ಜತೆ ಅಂದು ಬೆಳಗ್ಗೆ ಇಡೀ ಗ್ರಾಮ ಸಂಚರಿಸಿ ಅಮೃತ ಸರೋವರ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ಪ್ರತಿಜ್ಞೆ ಮಾಡಲಾಗುವುದು. ಸರೋವರ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟು ಆರೈಕೆ ಮಾಡಲಾಗುವುದು ಎಂದು ತಿಳಿಸಿದರು.