

ಚಿಕ್ಕೋಡಿ: ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ಮೂಲಸೌಕರ್ಯ ಸೇರಿ ಒಟ್ಟು ೮ ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ತಾಲೂಕಿನ ವಡ್ರಾಳ, ಕರೋಶಿ, ಬಂಬಲವಾಡ, ಹೊನ್ನಗುಡ್ಡ ಲಕ್ಷ್ಮಿ ದೇವಸ್ಥಾನ ರಸ್ತೆ ಕಾಮಗಾರಿ ಸೇರಿ ಒಟ್ಟು ೬ ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ನಸಲಾಪುರ, ಬಾವನಸೌದತ್ತಿ, ವಡ್ರಾಳ, ಕರೋಶಿ, ಬಂಬಲವಾಡ ಗ್ರಾಮದಲ್ಲಿ ತಲಾ ೧ ಕೋಟಿ ರೂ.ಗಳಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು. ಬಂಬಲವಾಡ ಗ್ರಾಮದಿಂದ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಹೊನ್ನಗುಡ್ಡ ಲಕ್ಷ್ಮಿ ದೇವಸ್ಥಾನದ ಬಳಿ ಒಟ್ಟು ೩ ಕಿಮೀ ರಸ್ತೆ ಕಾಮಗಾರಿಗೆ ೩ ಕೋಟಿ ರೂ. ಮಂಜೂರಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಶಿವು ಪಾಟೀಲ, ಶ್ಯಾಮ ರೇವಡೆ, ರುದ್ರಪ್ಪ ಸಂಗಪ್ಪಗೋಳ, ವಡ್ರಾಳ ಗ್ರಾಪಂ ಅಧ್ಯಕ್ಷೆ ಪದ್ಮಜಾ ಸನದಿ, ದುಂಡಪ್ಪ ತಂಗೋಜಿ, ಗ್ರಾಪಂ ಮಾಜಿ ಅಧ್ಯಕ್ಷ ರಾವಪ್ಪ ಪೂಜಾರಿ, ಕಲ್ಲಪ್ಪ ಏಕಣೆ, ಬಸು ಮುಂಡೆ, ರಾಜು ಕೋಟಗಿ, ಶಂಕರಗೌಡ ಪಾಟೀಲ, ಕರೋಶಿ ಗ್ರಾಪಂ ಮಾಜಿ ಅಧ್ಯಕ್ಷ ಸಂಜು ಕಾಂಬಳೆ, ಅರುಣ ನರಗುಂದೆ, ಸದಾಶಿವ ಮುರಚಟ್ಟಿ, ಜ್ಞಾನೇಶ್ವರ ಪಾಟೀಲ, ಸುರೇಶ ಘರಬುಡೆ, ಬಸು ಭಾತೆ, ಮಹಾಂತೇಶ ಭಾತೆ, ಬಾಬು ಜಮಾದಾರ, ವಾನಂದ ಕೇಸ್ತಿ ಇತರರಿದ್ದರು.