

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ಮತ್ತು ಬಾದಾಮಿ ಮತಕ್ಷೇತ್ರಗಳಲ್ಲಿ ಸ್ಥಾಪಿಸಲಾದ ವಿವಿಧ ಚೆಕ್‌ಪೋಸ್ಟಗಳಿಗೆ ಶುಕ್ರವಾರ ರಾತ್ರಿ ಜಿಲ್ಲಾಽಕಾರಿಗಳು ಆಗಿರುವ ಜಿಲ್ಲಾ ಚುನಾವಣಾಽಕಾರಿ ಪಿ.ಸುನೀಲ್‌ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನವನಗರದ ಎಪಿಎಂಸಿ ಚೆಕ್‌ಪೋಸ್ಟ, ಗದ್ದನಕೇರಿ ಕ್ರಾಸ್ ಚೆಕ್‌ಪೋಸ್ಟ, ಕುಳಗೇರಿ ಕ್ರಾಸ್‌ನಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಚೆಕ್‌ಪೋಸ್ಟನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯವೈಖರಿ, ತಪಾಸಣೆ ಮಾಡಲಾದ ವಾಹನಗಳ ಮಾಹಿತಿಗಳನ್ನೊಳಗೊಂಡ ವಹಿತಿಯನ್ನು ಪಡೆದುಕೊಂಡರು.
ಈ ವೇಳೆ ಯುಕೆಪಿ ಮಹಾವ್ಯವಸ್ಥಾಪಕ ಭಂವರ ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಜಯಪ್ರಕಾಶ, ಪ್ರೊಬೇಷನರಿ ಐ.ಎ.ಎಸ್ ಅಽಕಾರಿ ಕನಿಷ್ಕ ಸೇರಿದಂತೆ ಇತರರು ಇದ್ದರು.
೪ ಲಕ್ಷ ಹಣ, ೯೩೯೨ ಲೀಟರ್ ಲಿಕ್ಕರ್ ಜಪ್ತಿ
ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು ೪ ಲಕ್ಷ ನಗದು ಹಣ ಮತ್ತು ೯೩೯೨ ಲೀಟರ್ ಲಿಕ್ಕರ ಜಪ್ತಿ ಮಾಡಲಾಗಿದೆ. ಮುಧೋಳ ಕ್ಷೇತ್ರದಲ್ಲಿ ೩೦೨೮.೧೪ ರೂ.ಗಳ ಮೌಲ್ಯದ ೭.೬೮ ಲೀಟರ್ ಲಿಕ್ಕರ್, ತೇರದಾಳ ಕ್ಷೇತ್ರದಲ್ಲಿ ೨೫೩೯ ರೂ.ಗಳ ಮೊತ್ತದ ೬.೧೨ ಲೀಟರ್ ಲಿಕ್ಕರ್, ಜಮಖಂಡಿ ಕ್ಷೇತ್ರದಲ್ಲಿ ೪ ಲಕ್ಷ ರೂ.ಗಳ ನಗದು ಹಣ, ಬೀಳಗಿ ಕ್ಷೇತ್ರದಲ್ಲಿ ೮೬೫೪ ರೂ. ಮೊತ್ತದ ೨೫.೧೨ ಲೀಟರ್ ಲಿಕ್ಕರ್, ಬಾದಾಮಿ ಕ್ಷೇತ್ರದಲ್ಲಿ ೨ ಲಕ್ಷ ರೂ. ನಗದು ಹಣ, ೩೬೫೯ ರೂ. ಮೊತ್ತದ ೧೮.೩ ಲೀಟರ್ ಲಿಕ್ಕರ್, ಬಾಗಲಕೋಟೆ ಕ್ಷೇತ್ರದಲ್ಲಿ ೧೫.೩೭ ಲಕ್ಷ ರೂ.ಮೊತ್ತದ ೯೩೧೭.೫ ಲೀಟರ್ ಲಿಕ್ಕರ್ ಹಾಗೂ ಹುನಗುಂದ ಕ್ಷೇತ್ರದಲ್ಲಿ ೧೦೬೨೦ ರೂ. ಮೊತ್ತದ ೧೭.೭ ಲೀಟರ್ ಲಿಕ್ಕರ ಜಪ್ತಿಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಽಕಾರಿ ಪಿ.ಸುನೀಲ್‌ಕುಮಾರ ತಿಳಿಸಿದ್ದಾರೆ.