೩.೧೦ ಕೋಟಿ ರೂ. ಅನುದಾನ ಮಂಜೂರು

6BRG1
Published on

ಬೋರಗಾಂವ: ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ವಿಶೇಷ ಪ್ರಯತ್ನದಿಂದ ಸರ್ಕಾರದಿಂದ ಅಲ್ಪಸಂಖ್ಯಾತರ ಅನುದಾನಡಿ ಬೋರಗಾಂವದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೩.೧೦ ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಪಪಂ ಸದಸ್ಯ ಶರದ ಜಂಗಟೆ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋರಗಾಂವ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ. ವಾರ್ಡ್ ನಂ.೧೧ರಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ೧.೨೦ ಕೋಟಿ ರೂ., ವಾರ್ಡ್ ನಂ.೧೨ರಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ೫೦ ಲಕ್ಷ ರೂ. ಹಾಗೂ ವಾರ್ಡ್ ನಂ.೧ರ ವಿವಿಧ ಬೀದಿಗಳಲ್ಲಿ ೧ ಕೋಟಿ ರೂಪಾಯಿ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಗಾಂಧಿಚೌಕನಲ್ಲಿರುವ ಯಲ್ಲಮ್ಮ ದೇವಸ್ಥಾನದ ಜೀರ್ಣೋದ್ಧಾರಕ್ಕೆ ೫ ಲಕ್ಷ ರೂ. ಹಾಗೂ ಜಲಧಾರ ಹನುಮಾನ್ ದೇವಸ್ಥಾನಕ್ಕೆ ೫ ಲಕ್ಷ ರೂ. ಸೇರಿ ೩.೧೦ ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು.

ಮುಖಂಡರಾದ ಶಿಶು ಐದಮಾಳೆ, ಅಜಿತ್ ತೆರದಾಳೆ, ಜಿತೇಂದ್ರ ಪಾಟೀಲ, ಬಬನ ರೆಂದಾಳೆ, ಶಂಕರ ಗುರವ, ಅಜಿತ್ ಕಾಂಬಳೆ, ಬಾಹುಬಲಿ ಪಾಟೀಲ, ಮಹಪತಿ ಖೋತ, ಮಹಾದೇವ ಐದಮಾಳೆ, ಕಲ್ಲು ಚಿಪ್ರೆ, ಮಹಾದೇವ ಮಡಿವಾಳ, ಭಾರತ ಪಾಟೀಲ, ಸರ್ಜೆರಾವ ಧನವಡೆ, ಜಿತೇಂದ್ರ ಅಮ್ಮನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net