೧೮ ತಿಂಗಳಿAದ ಗದ್ದುಗೆ ಭಣಭಣ

ydg01
Published on

ಯಾದಗಿರಿ: ಒಂದಿಲ್ಲೊAದು ಅಡೆತಡೆ ಎದುರಿಸುತ್ತಿರುವ ಸ್ಥಳೀಯ ನಗರಸಭೆಗೆ ಈಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮಿಸಲು ಪ್ರಕಟಗೊಂಡು ಎರಡು ತಿಂಗಳಾಗುತ್ತಿದ್ದರೂ ಚುನಾವಣೆಗೆ ಮುಹೂರ್ತ ಕೂಡಿಬಂದಿಲ್ಲ. ಇದರಿಂದಾಗಿ ಚುನಾಯಿತ ಸದಸ್ಯರಿಗೆ ಅಧಿಕಾರ ಭಾಗ್ಯ ಇನ್ನೆಷ್ಟು ದಿನ ಎಂಬ ಪ್ರಶ್ನೆ ಎದುರಾಗಿದೆ.

ಯಾದಗಿರಿಯನ್ನು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಂಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಾಣಸ್ವಾಮಿ ತಮ್ಮ ಹೆಸರು ಯಾದಗಿರಿ ಮತದಾರರ ಪಟ್ಟಿಗೆ ಸೇರಿಸಲು ಆಗಸ್ಟ್ನಲ್ಲಿ ಫಾರಂ ೮ ಸಲ್ಲಿಸಿದ್ದು, ಕಾಂಗ್ರೆಸ್‌ನ ಅವಿನಾಶ್ ಜಗನ್ಮಾಥ ಎಂಬುವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರ ವಿಚಾರಣೆ ಮುಗಿದಿದ್ದರೂ ಇತ್ಯರ್ಥವಾಗದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಮುಂದೂಡಲಾಗುತ್ತಿದೆ ಎನ್ನಲಾಗುತ್ತಿದೆ.

ಬಿಜೆಪಿಯ ಕೆಲ ಸದಸ್ಯರ ಪ್ರಕಾರ, ಮೀಸಲಾತಿ ನಿಗದಿಯಾದ ಕೆಲವೇ ದಿನಗಳಲ್ಲಿ ಚುನಾವಣೆ ಮಾಡಬಹುದಿತ್ತು. ಆದರೆ ಮೀಸಲು ವಿಳಂಬದಿAದಾಗಿ ೧೮ ತಿಂಗಳಿAದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ೧೬ ತಿಂಗಳಿAದ ಪೂರ್ಣಪ್ರಮಾಣದ ಆಯುಕ್ತರಿಲ್ಲ. ಪ್ರಭಾರಿ ಆಯುಕ್ತರ ಮೂಲಕ ಆಡಳಿತ ನಡೆದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿದೆ.

ಎಷ್ಟು ತಿಂಗಳು ಅಂತ ಅಧ್ಯಕ್ಷ-ಉಪಾಧ್ಯಕ್ಷರ ಖುರ್ಚಿ ಖಾಲಿ ಇರಬೇಕು? ಸ್ಥಳೀಯ ಜನಪ್ರತಿನಿಧಿಗಳು ಜನರ ಸೇವೆ ಮಾಡಲು ಆಯ್ಕೆಯಾಗಿದ್ದರೂ ಅಭಿವೃದ್ಧಿ ಕೆಲಸ ಮಾಡಲು ಅನುವು ಆಗುತ್ತಿಲ್ಲ. ಅಂತಲೇ ನಗರಸಭೆಯಲ್ಲಿ ಅಧಿಕಾರಿಗಳು ಆಡಿz್ದೆÃ ಆಟವಾಗಿ ಆಡಳಿತ ವ್ಯವಸ್ಥೆ ಹಳ್ಳ ಹಿಡಿದಿದ್ದು, ಚುನಾಯಿತ ೩೧ ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net