೧೫೦ ಉಪನಿಷತ್ತುಗಳ ಎರಡು ಸಂಪುಟ ಲೋಕಾರ್ಪಣೆ

12 ckm 4 girija shankar
ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್
Published on

ಚಿಕ್ಕಮಗಳೂರು: ನಗರದ ಬಸವನಹಳ್ಳಿ ರಂಗಣ್ಣನವರ ಛತ್ರದಲ್ಲಿ ಡಿ. ೧೫ರಂದು ಸಂಜೆ ೪.೩೦ಕ್ಕೆ ಡಾ.ಬೆಳವಾಡಿ ಹರೀಶ ಭಟ್ಟ ಸಂಗ್ರಹಿಸಿ ಅರ್ಥ ಸಹಿತವಾಗಿ ಅನುವಾದಿಸಿರುವ ೧೫೦ ಉಪನಿಷತ್ತುಗಳ ಎರಡು ಸಂಪುಟಗಳು ಲೋಕಾರ್ಪಣೆಯಾಗಲಿವೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಭವ ಪ್ರಕಾಶನ ಟ್ರಸ್ಟ್, ಬೆಂಗಳೂರಿನ ಋಷ್ಯಶೃಂಗ ಪ್ರತಿಷ್ಠಾನ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಹರಿಹರಪುರ ಮಠಾಧೀಶರಾದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹರ‍್ನಳ್ಳಿ ಉದ್ಘಾಟಿಸುವರು. ಕಾಫಿ ಬೆಳೆಗಾರ ಎಂ.ಆರ್.ಗುರುಮೂರ್ತಿ ಮತ್ತು ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಸಂಪುಟಗಳನ್ನು ಲೋಕಾರ್ಪಣೆಗೊಳಿಸುವರು ಎಂದು ಮಾಹಿತಿ ನೀಡಿದರು.

ಉದ್ಭವ ಪ್ರಕಾಶನದ ಆಡಳಿತ ಟ್ರಸ್ಟಿ ಡಿ.ಎಚ್.ನಟರಾಜ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮಹಾ ಸಂಪುಟಗಳನ್ನು ನಾಡಿನ ಖ್ಯಾತ ಸಂಸ್ಕೃತಿ ಚಿಂತಕಿ ಡಾ.ವೀಣಾ ಬನ್ನಂಜೆ ಪರಿಚಯಿಸುವರು. ಅತಿಥಿಗಳಾಗಿ ಕಾಫಿ ಬೆಳೆಗಾರ ಡಿ.ಎಂ.ಶAಕರ್ ಮತ್ತು ಎಂ.ಕೆ.ಶ್ರೀನಿವಾಸ ಶೆಟ್ಟಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥ ಎಂ.ಎಸ್.ಜಯರಾಮ್ ಪಾಲ್ಗೊಳ್ಳಲಿದ್ದಾರೆ ಎಂದರು.

ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಬೆಂಗಳೂರಿನ ಫಾರ್ವರ್ಡ್ ಫೌಂಡೇಶನ್‌ನ ಟ್ರಸ್ಟಿ ಜಿ.ವಿ.ಕೃಷ್ಣ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ವಾಣಿಜ್ಯೋದ್ಯಮಿ ವೆಂಕಟಸುಬ್ಬರಾವ್, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಎನ್.ಕೆ.ಅಶ್ವಿನ್, ಸಾಂಸ್ಕೃತಿಕ ಸಂಘದ ಆನಂದ್‌ಕುಮಾರ್ ಶೆಟ್ಟಿ ಹಾಗೂ ದಾಸ ಸಾಹಿತ್ಯ ಭಜನಾ ಮಂಡಳಿ ಸಂಚಾಲಕ ಉದಯಸಿಂಹ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಈ ಸಂಪುಟಗಳಲ್ಲಿ ಇದುವರೆಗೆ ಪ್ರಚಲಿತದಲ್ಲಿರದಿದ್ದ ೧೦೦ ಕ್ಕೂ ಹೆಚ್ಚು ಉಪನಿಷತ್ತುಗಳನ್ನು ಒಳಗೊಂಡಿದೆ. ಅವುಗಳನ್ನು ಡಾ.ಬೆಳವಾಡಿ ಹರೀಶ ಭಟ್ಟ ದೇಶ ಮತ್ತು ವಿದೇಶಗಳಿಗೆ ತೆರಳಿ ಸಂಗ್ರಹಿಸಿದ್ದು, ಅರ್ಥ ಸಹಿತ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವುಗಳನ್ನು ವೇದಗಳ ಅನುಕ್ರಮದಲ್ಲಿ ಜೋಡಿಸಲಾಗಿದೆ. ಇವು ವಿಶೇಷ ಅಧ್ಯಯನಕ್ಕೆ ಆಕರಗಳಾಗಿವೆ. ಸಾಮಾನ್ಯವಾಗಿ ದಶೋಪನಿಷತ್ತುಗಳು ಜನಪ್ರಿಯವಾಗಿದ್ದು, ಆಚಾರ್ಯತ್ರಯರು ಅವುಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಅವುಗಳ ಬಗ್ಗೆಯೇ ಚಿಂತನೆ ಮತ್ತು ಮರುಸೃಷ್ಟಿಗಳು ಕೂಡ ಆಗಿವೆ. ಆದರೆ ಈ ಸಂಪುಟಗಳಲ್ಲಿ ಶೋಧಿಸಿರುವ ಉಪನಿಷತ್ತುಗಳ ಶಾಖೆ, ಅಧ್ಯಯನದ ವಿವರ, ರೂಪ ಮತ್ತು ಕರ್ಮಗಳನ್ನು ಸ್ಪಷ್ಟೀಕರಿಸಲಾಗಿದೆ. ವಿಶೇಷವೆಂದರೆ ಈ ಸಂಗ್ರಹ ಕಾರ್ಯದಲ್ಲಿ ಅತ್ಯಂತ ಕಿರಿದಾದ ಕಲಿಸಂತರಣೋಪನಿಷತ್ತು ಕೂಡ ಸೇರಿದೆ. ಇವುಗಳ ವಿರಾಟ್ ಸ್ವರೂಪದ ವರ್ಣನೆ, ಬ್ರಹ್ಮಾಂಡ ವಿಕಾಸಗೊಂಡ ರೀತಿ, ಜೀವ ಜಗತ್ತಿನ ಸಂಬAಧವನ್ನು ವಿಶ್ಲೇಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಿ.ಎಚ್.ನಟರಾಜ್, ಡಾ.ಬೆಳವಾಡಿ ಮಂಜುನಾಥ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net