

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಚುನಾವಣೆಗೆ ಗುರುವಾರದಂದು ಒಟ್ಟು ೧೩ ಅಭ್ಯರ್ಥಿಗಳಿಂದ ೧೪ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಬಿಜೆಪಿ ಪಕ್ಷದಿಂದ ಪರ್ವತಗೌಡ ಗದ್ದಿಗೌಡರ ಎರಡು ನಾಮಪತ್ರ ಸಲ್ಲಿಸಿದರೆ, ಕಾಂಗ್ರೇಸ್ ಪಕ್ಷದಿಂದ ಸಂಯುಕ್ತ ಪಾಟೀಲ, ಪಕ್ಷೇತರದಿಂದ ನಾಗರಾಜ ಕಲಕುಟಗರ, ಮಲ್ಲಿಕಾರ್ಜುನ ಕೆಂಗನಾಳ, ಉತ್ತಮ ಪ್ರಜಾಕೀಯ ಪಕ್ಷದಿಂದ ಅಂತೋಷ ಸವ್ವಾಸೆ, ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಶಂಕರ ವೆಂಕಪ್ಪ ನಾಯ್ಕರ, ಪಕ್ಷೇತರದಿಂದ ಮುತ್ತು ಸುರಕೋಡ, ಮಾರುತಿ ಜಮೀನ್ದಾರ, ಹನಮಪ್ಪ ತಳವಾರ, ಸಂಗಮೇಶ ಭಾವಿಕಟ್ಟಿ, ಬಹುಜನ ಸಮಾಜ ಪಕ್ಷದಿಂದ ಮಹದೇವ ಸಿದಗೋಣಿ, ಪಕ್ಷೇತರದಿಂದ ಜ್ಯೋತಿಲಕ್ಷ್ಮೀ ಹಂಪಿಹೊಳಿಮಠ, ಅಂಬ್ರೋಸ್ ಡಿ ಮೆಲ್ಲೋ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಪ್ರಾರಂಭದಿಂದ ಇಲ್ಲಯವರೆಗೆ ಒಟ್ಟು ೨೫ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.