೧೨ನೇ ಶತಮಾನದಲ್ಲಿ ಸಾಹಿತ್ಯ ಕ್ರಾಂತಿ

30 hbd 02
Published on

ಹುಮನಾಬಾದ್: ಕರ್ನಾಟಕ ಇತಿಹಾಸದಲ್ಲಿ ೧೨ನೇ ಶತಮಾನ ಧರ್ಮ ತತ್ವಶಾಸ್ತ ಮತ್ತು ಸಾಹಿತ್ಯ ಕ್ರಾಂತಿಗೆ ಸಾಕ್ಷಿಯಾಗಿದೆ. ಇದು ಸಾಮಾಜಿಕ ಪರಿವರ್ತನೆಗೂ ಕಾರಣವಾಯಿತು ಎಂದು ಸಾಹಿತಿ ಬಾಬುರಾವ ಪಾಟೀಲ್ ಚಿತ್ತಕೋಟ ಹೇಳಿದರು.
ಹುಡಗಿ ಗ್ರಾಮದ ಜನತಾ ನಗರ ಕಸ್ತೂರಬಾ ಬಾಲಕಿಯರ ವಸತಿ ಶಾಲೆಯಲ್ಲಿ ಮಂಗಳವಾರ ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಪರಿಷತ್ ಸಂಸ್ಥಾಪನಾ ದಿನ ಹಾಗೂ ಸಂಸ್ಥಾಪಕ, ಜಗದ್ಗುರು ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಂಗಮಕರ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ೧೯೮೬ ಆಗಸ್ಟ್ ೨೯ರಂದು ಉದ್ಘಾಟನೆಯಾಯಿತು. ಈ ಮೂಲಕ ಶರಣ ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಸಂರಕ್ಷಿಸಲು ಪ್ರಸಾರ ಮಾಡಲು ಶ್ರಮಿಸಲಾಗುತ್ತಿದೆ. ಶರಣ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸುವುದು ಇದರ ಮುಖ್ಯ ಉದ್ದೇಶ ಎಂದರು.
ಮುಖ್ಯಗುರು ಸುಜಾತಾ ದಿಲೀಪಕುಮರ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಹಿರಿಯ ನಿರೀಕ್ಷಣಾಧಿಕಾರಿ ದತ್ತಾತ್ರೇಯ, ಸಾಹಿತಿ ಈಶ್ವರ ತಡೋಳ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ ಕಂಪಲಿ, ಲಲಿತಾ ರಮೇಶ, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net