

ಕೋಲಾರ: ಕೋಲಾರ ಕರಷಿ ಮಾರುಕಟ್ಟೆಯಿಂದ ರಾಜಸ್ಥಾನದ ಜೈಪುರಕ್ಕೆ ಕಳುಹಿಸಲಾಗಿದ್ದ ಟೊಮ್ಯಾಟೊ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ೨೧ ಲಕ್ಷ ರೂ.ಮೌಲ್ಯದ ಉತ್ಪನ್ನವನ್ನು ಲಾರಿ ಚಾಲಕ ೧೧ ಲಕ್ಷ ರೂ.ಗೆ ಮಾರಾಟ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಕೋಲಾರ ಕೃಷಿ ಮಾರುಕಟ್ಟೆಯ ಎಸ್‌ವಿಟಿ ಮಂಡಿ ಮಾಲೀಕ ಮುನಿರೆಡ್ಡಿ ಹೇಳಿಕೆ ನೀಡಿದ್ದು, ೨೧ ಲಕ್ಷ ಮೌಲ್ಯದ ಟೊಮ್ಯಾಟೊವನ್ನ ೧೧ ಲಕ್ಷಕ್ಕೆ ಮಾರಾಟ ಮಾಡಿ ೫ ಲಕ್ಷ ಹಣ ಪಡೆದುಕೊಂಡು ಲಾರಿ ಚಾಲಕ ಅನ್ವರ್ ಪರಾರಿಯಾಗಿದ್ದಾನೆ. ಗುಜರಾತ್ ನ ಅಹ್ಮದಾಬಾದ್‌ನ ಮಾರುಕಟ್ಟೆಯ ಪ್ರಕಾಶ್ ಎಂಬುವರಿಗೆ ಮಾರಾಟ ಮಾಡಿದ್ದು, ಈ ಕುರಿತು ಪ್ರಕಾಶ್ ತಪ್ಪೊಪ್ಪಿಕೊಂಡಿದ್ದಾನೆ.
ಕಳ್ಳತನದ ಮಾಲು ಎಂದು ಗೊತ್ತಿಲ್ಲದೆ ಟೊಮ್ಯಾಟೊ ಖರೀದಿಸಿ, ಮಾರಾಟ ಮಾಡಿದ್ದು, ಈ ಕುರಿತು ಪ್ರಕಾಶ್ ಕ್ಷಮೆ ಯಾಚಿಸಿದ್ದಾನೆ. ಅಹ್ಮದಾಬಾದ್ ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಮಂಡಳಿ ಮಂಗಳವಾರ ಸಭೆ ನಡೆಸಿ ಪ್ರಕರಣ ಕುರಿತು ಕ್ರಮಕೈಗೊಳ್ಳುವ ಭರವಸೆ ನೀಡಿದೆ. ನ್ಯಾಯ ಸಿಗದಿದ್ದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಟೊಮ್ಯಾಟೊ ಸಾಗಿಸಲು ಸಹಕರಿಸಿದ್ದ ಕೋಲಾರದ ಮೆಹತ್ ಟ್ರಾನ್‌ಸ್ಪೋರ್ಟ್ನ ಮಾಲಿಕ ಸಾಧಿಕ್, ಅಹ್ಮದಾಬಾದ್‌ನ ಮಂಡಿ ಮಾಲಿಕ, ಲಾರಿ ಮಾಲಿಕ ಅಹ್ಮದಾಬಾದ್‌ನಲ್ಲಿ ಬೀಡುಬಿಟ್ಟಿರುವುದಾಗಿ ಮುನಿರೆಡ್ಡಿ ವಿವರಿಸಿದರು.