೧.೩೦ ಲ ರೂ. ಮೌಲ್ಯದ ಚಿನ್ನಾಭರಣ ಕಳವು

Crime Logo
Published on

ಕಲಬುರಗಿ: ನಗರದ ಕುಸನೂರದ ಕೃಷ್ಣಾ ನಗರದ ಕಾಲನಿಯ ಮನೆಯ ಬಾಗಿಲು ಕೀಲಿ ಮುರಿದು ೧.೩೦ ಲ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಉಪನ್ಯಾಸಕ ಡಾ.ಮಾಣಿಕ ಸಿಂಧೆ ಅವರ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದೆ. ಮಾ.೨೯ರಂದು ಸ್ವಗ್ರಾಮ ಭಾಲ್ಕಿ ತಾಲೂಕಿಗೆ ಹೋಗಿದ್ದು, ಮಾ.೩೦ರಂದು ಮನೆಯ ಬಾಗಿಲು ಮುರಿದಿರುವುದನ್ನು ಮನೆ ಮಾಲಿಕ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ನೋಡಿದಾಗ ಕಳ್ಳತನ ನಡೆದಿದ್ದು ತಿಳಿದಿದೆ. ಮನೆಯ ಅಲಮಾರಾದಲ್ಲಿದ್ದ ಬಂಗಾರದ ಕಿವಿಯೋಲೆ, ಬೆರಳುಂಗರ, ಬೆಳ್ಳಿ ಬಟ್ಟಲು, ಪ್ಲೇಟ್​, ಬೆಳ್ಳಿ ಚಮಚ, ೪೫ ಸಾವಿರ ರೂ. ನಗದು ಸೇರಿ ಒಟ್ಟು ೧.೩೦ ಲ ರೂ. ಮೌಲ್ಯದ ಕಳ್ಳತನ ನಡೆದಿದೆ ಎಂದು ದೂರು ನೀಡಿದ್ದು, ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net