೧.೧೫ ಕೋಟಿ ರೂ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ

6 ckm 9
ಚಿಕ್ಕಮಗಳೂರಿನ ಕಲ್ಯಾಣ ನಗರ ಅಂಗನವಾಡಿ ಕೇಂದ್ರದಲ್ಲಿ ವಿವಿಧ ಅಂಗನವಾಡಿ ಕೇಂದ್ರಗಳ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕ ಎಚ್.ಡಿ.ತಮ್ಮಯ್ಯ ನೆರವೇರಿಸಿದರು. ಸುಜಾತಾ ಶಿವಕುಮಾರ್, ನಯಾಜ್ ಅಹಮದ್, ಬಿ.ಸಿ.ಬಸವರಾಜು, ರೇಖಾ ಹುಲಿಯಪ್ಪ ಗೌಡ, ಮಣಿಕಂಠ, ಮುನೀರ್ ಅಹಮದ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಬಹಳ ಅನನ್ಯವಾಗಿದ್ದು, ಜನಪ್ರತಿನಿಧಿಗಳು ಹಾಗೂ ಸ್ಥಳೀಯರು ಸಹಕಾರ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಅಭಿಪ್ರಾಯಪಟ್ಟರು.

ನಗರದ ವಿವಿಧ ವಾರ್ಡ್ಗಳಲ್ಲಿ ಶುಕ್ರವಾರ ಸುಮಾರು ೧.೧೫ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ದಿಢೀರ್ ನಗರ, ಹಕ್ಕಿಪಿಕ್ಕಿ ಕಾಲನಿ, ಐಜಿ ಬಡಾವಣೆ, ಶಾಂತಿನಗರ-೨, ಕುಪ್ಪೇನಹಳ್ಳಿ, ಕಲ್ಯಾಣನಗರ ಅಂಗನವಾಡಿ ಕೇಂದ್ರಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಥಳೀಯರ ಸಹಕಾರ ದೊರೆತಾಗ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಎಂದರು.

ಕೆಆರ್‌ಡಿಎಲ್ ಮತ್ತು ನಿರ್ಮಿತಿ ಕೇಂದ್ರದಿAದ ನಿರ್ಮಾಣ ಮಾಡಿರುವ ಅಂಗನವಾಡಿ ಕೇಂದ್ರಗಳು ಉತ್ತಮ ಗುಣಮಟ್ಟಗಳಿಂದ ಕೂಡಿವೆ. ಅಂಗನವಾಡಿ ಕೇಂದ್ರಗಳಲ್ಲಿ ಬಡವರ ಮಕ್ಕಳು ಅಭ್ಯಾಸ ಮಾಡುವುದರಿಂದ ಅವರಿಗೆ ತೊಂದರೆಯಾಗದAತೆ ತಲಾ ೨೦ ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ನೂತನ ಅಂಗನವಾಡಿ ಕೇಂದ್ರಗಳ ಸುತ್ತ ಕಾಂಪೌAಡ್ ನಿರ್ಮಾಣ ಮಾಡಲು ನಗರಸಭೆ ಆಯುಕ್ತರಿಗೆ ಸೂಚಿಸಿz್ದೆÃನೆ. ನಿವೇಶನ ದೊರೆತ ಬಳಿಕ ಕಾಂಪೌAಡ್ ನಿರ್ಮಿಸಲಿದ್ದು, ಸ್ಥಳೀಯರು ಸೇರಿ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ ಹಣ್ಣು, ತರಕಾರಿ ಗಿಡ ನೆಟ್ಟು ಕೈತೋಟ ಮಾಡಿದರೆ ಪೋಷಕಾಂಶಗಳ ತರಕಾರಿಗಳು ಬೆಳೆಯಬಹುದಾಗಿದೆ ಎಂದರು.

ಬಡವರ ಬದುಕಿನ ಬಗ್ಗೆ ಹಾಗೂ ವ್ಯವಸ್ಥೆ ಕುರಿತು ಹೇಳುತ್ತೇನೆ. ಬಣ್ಣದ ಮಾತುಗಳನ್ನಾಡಿ ಮರುಳು ಮಾಡುವ ಅಗತ್ಯ ಇಲ್ಲ. ಸರ್ವರೂ ಕಷ್ಟ-ಸುಖಗಳನ್ನು ಹಂಚಿಕೊAಡು ಬಾಳುವುದು ಒಳಿತು ಎಂದು ಹೇಳಿದರು.

ಪಕ್ಷ, ಜಾತಿ, ಧರ್ಮ ಮಾಡದೆ ಎಲ್ಲ ವರ್ಗದ ಬಡವರೇ ಪಕ್ಷ, ಜಾತಿ ಆಗಿದ್ದು ಅವರುಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರಸ್ತೆ, ಚರಂಡಿಗಿAತ ಮಿಗಿಲಾಗಿ ಒಳ್ಳೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇನ್ನೆರಡು ವರ್ಷದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ನಗರಸಭೆ ಸದಸ್ಯರಾದ ಮಣಿಕಂಠ, ಮುನೀರ್ ಅಹಮದ್, ಖಲಂದರ್, ಗುರುಮಲ್ಲಪ್ಪ, ಇಂದಿರಾಶAಕರ್, ಆಯುಕ್ತ ಬಿ.ಸಿ ಬಸವರಾಜು, ಸಿಡಿಪಿಓ ರಂಗನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net