

ಬಳ್ಳಾರಿ : ನಗರದ ಸಂಗನಕಲ್ಲು ರಸ್ತೆಯಲ್ಲಿ ಬಳ್ಳಾರಿ ಸೈಕ್ಲಿಂಗ್ ಕ್ಲಬ್ ಹಾಗೂ ಜೆಎಸ್‌ಡಬ್ಲೂೃ ಸಹಯೋಗದೊಂದಿಗೆ ‘ಸ್ಟೀಲ್ ಸಿಟಿ ರನ್ ’ ಎಂಬ ಮ್ಯಾರಥಾನ್ ಓಟ ಭಾನುವಾರ ನಡೆಯಿತು.
ಓಟದಲ್ಲಿ ಕರ್ನಾಟಕ ಸೇರಿ ದೇಶದ ವಿವಿಧ 11 ರಾಜ್ಯಗಳಿಂದ 4 ಸಾವಿರಕ್ಕೂ ಅಧಿಕ ಸ್ಪಧಾರ್ಥಿಗಳು ಭಾಗವಹಿಸಿದ್ದರು. 10 ಕಿಮೀ
ಓಟದಲ್ಲಿ ಮಹಾರಾಷ್ಟದ ರಾಹುಲ್ ಸಂ, 5 ಕಿಮೀ ಓಟದಲ್ಲಿ ಬೆಳಗಾವಿಯ ಶಿವಾನಂದ ಲಕ್ಷ್ಮಣ ಶಿಗಾರೆ ಪ್ರಥಮ ಸ್ಥಾನ
ಗಳಿಸಿದ್ದು, ಈ ಬಾರಿಯ ಸ್ಪರ್ಧೆಯ ಅತಿ ವೇಗದ ಓಟಗಾರರಾಗಿ ಹೊರ ಹೊಮ್ಮಿದ್ದಾರೆ. ಮ್ಯಾರಥಾನ್ ಓಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಕ್ರಮವಾಗಿ 5,3,2 ಸಾವಿರ ರೂ.ಗಳ ಬಹುಮಾನವನ್ನು ನಗರ ಶಾಸಕ ನಾರಾ ಭರತ್‌ರೆಡ್ಡಿ, ಎಸ್ಪಿ ಡಾ. ವಿ.ಜೆ.ಶೋಭಾರಾಣಿ ವಿತರಿಸಿ, ಪ್ರೋತ್ಸಾಹಿಸಿದರು. ಮಹಿಳಾ ವಿಭಾಗದ ವಿಜೇತರಿಗೆ ಡಾ. ಸೋಮನಾಥ, ಮಂಜು ಮೋದಿ ಬಹುಮಾನ ವಿತರಿಸಿದರು. ಮ್ಯಾರಥಾನ್ ಓಟದಲ್ಲಿ 10 ಕಿಮೀ ಓಟದಲ್ಲಿ 5 ಸಾವಿರಕ್ಕೂ ಹೆಚ್ಚು ಜನ, 5 ಕಿಮೀ ಓಟದಲ್ಲಿ 3 ಸಾವಿರಕ್ಕೂ ಹೆಚ್ಚು ಜನ ಮತ್ತು 3 ಕಿಮೀ ಓಟದಲ್ಲಿ 350 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಶೇ.30 ಕ್ಕೂ ಹೆಚ್ಚು ಮಹಿಳೆಯರು, ಬಾಲಕಿಯರು ಭಾಗವಹಿಸಿದ್ದರು. ಓಟದಲ್ಲಿ ಮಹಾರಾಷ್ಟ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ವಿವಿಧ 11 ರಾಜ್ಯಗಳಿಂದ ಹಾಗೂ ಕೀನ್ಯಾ ದೇಶದ ಓಬ್ಬ ಓಟಗಾರ ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸೈಕ್ಲಿಂಗ್ ಕ್ಲಬ್‌ನ ಅಧ್ಯಕ್ಷ ಡಾ.ರವಿಶಂಕರ, ಜಿಂದಾಲ್ ಸಂಸ್ಥೆ ಮುಖ್ಯಸ್ಥ ಮುರುಗನ್, ಡಾ.ಸುಂದರ, ಡಾ.ಸೋಮನಾಥ ಇತರರಿದ್ದರು.