

ಹಗರಿಬೊಮ್ಮನಹಳ್ಳಿ: ಹೋಳಿಯನ್ನು ಕೋಮು ಸೌಹಾರ್ದದಿಂದ ಆಚರಿಸಬೇಕು. ಸಾಮಾಜಿಕ ಜಾಲತಾಣವನ್ನು ಜಾಗ್ರತೆಯಿಂದ ಉಪಯೋಗಿಸುವಂತೆ ಸಿಪಿಐ ಪಿ.ವಿಕಾಸ ಲಮಾಣಿ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಹೋಳಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ನಾವು ಆಚರಿಸುವ ಹಬ್ಬಗಳು ಬೇರೆಯವರಿಗೆ ಮಾದರಿಯಾಗಬೇಕು. ಹೋಳಿ ಆಚರಣೆ ಯುವಕರಲ್ಲಿ ಉತ್ಸಾಹ ತಂದುಕೊಡುತ್ತದೆ. ಯಾವುದೇ ವ್ಯತ್ಯಾಸವಾಗದಂತೆ ಆಚರಿಸಬೇಕು ಎಂದು ಕರೆ ನೀಡಿದರು.
ಕಲರ್ಸ್ ವಿತ್ ಕಾರಂಜಿ ಸಂಘಟನೆಯ ಶಿವಶಂಕ್ರಯ್ಯ ಮಾತನಾಡಿ, ಪಟ್ಟಣದ ಕೂಡ್ಲಿಗಿ ವೃತ್ತದಲ್ಲಿ ಶುಕ್ರವಾರ ಬೆಳಗಿನಿಂದ ನಡೆಯುವ ಕಲರ್ಸ್ ವಿತ್ ಕಾರಂಜಿಯಲ್ಲಿ ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.
ಪಿಎಸ್‌ಐ ಬಸವರಾಜ ಅಡವಿಬಾವಿ, ಪುರಸಭೆ ಸದಸ್ಯ ದೀಪಕ್ ಸಾ ಕಠಾರೆ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ, ಜೆಡಿಎಸ್ ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಧರ್ಮಕರ್ತ ಕೃಷ್ಣಮೂರ್ತಿ ಶೆಟ್ರು, ವಿವಿಧ ಸಂಘಟನೆಗಳ ಪ್ರಮುಖರಾದ ಹಂಪಾಪಟ್ಟಣದ ಬಂಟರ ಕುಬೇರ, ಸೆರೆಗಾರ ಹುಚ್ಚಪ್ಪ, ಹುಳ್ಳಿ ಪ್ರಕಾಶ, ಸೋಡ ನಿಂಬಣ್ಣ, ಹೋಟೆಲ್ ಸಿದ್ದರಾಜು, ರಾಹುಲ್, ಪೊಲೀಸ್ ಸಿಬ್ಬಂದಿ ಮಲ್ಲೇಶ ನಾಯ್ಕ, ದಶರಥ, ಮಹೇಶ, ಮತ್ತಿತರರು ಇದ್ದರು.