ಹೋರಾಟದ ನೆಲದಲ್ಲಿ ಸ್ವಾಭಿಮಾನಕ್ಕೆ ಗೆಲುವು ಸುಲಭ

Fighting on the ground for self respect victory ease Bailahongala Belgaum
ಬೈಲಹೊಂಗಲ ಪಟ್ಟಣದ ಯೋಗಗುರು ಸಂಗಮೇಶ ಸವದತ್ತಿಮಠ ಅವರ ಮನೆಗೆ ಪ್ರಚಾರಕ್ಕೆ ಆಗಮಿಸಿದ ಡಾ. ವಿಶ್ವನಾಥ ಪಾಟೀಲ ಅವರಿಗೆ ಕಬ್ಬು ನೀಡಿ ನೀಡಿ ಸನ್ಮಾನಿಸಲಾಯಿತು.
Published on

ಬೈಲಹೊಂಗಲ: ಪಟ್ಟಣ ಸೇರಿ ಕ್ಷೇತ್ರದಲ್ಲಿ ಐದು ವರ್ಷಗಳ ಅವಧಿಯಲ್ಲಾದ ಕಾಮಗಾರಿಗಳು ಕಳಪೆಯಾಗಿದ್ದು, ಜನರ ತೆರಿಗೆ ಹಣ ದುರುಪಯೋಗವಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಆರೋಪಿಸಿದರು.

ಪಟ್ಟಣದ ವಿವಿದ ವಾರ್ಡ್‌ಗಳಲ್ಲಿ ಭಾನುವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗಳು, ಚನ್ನಮ್ಮ ಸಮಾಧಿ ಪ್ರವೇಶದ ದ್ವಿಮುಖ ಸಿಮೆಂಟ್ ರಸ್ತೆ ಸೇರಿ, ಗಟಾರಗಳು, ಡಾಂಬರೀಕರಣ ಕಾಮಗಾರಿಗಳು ಒಂದೆರಡು ವರ್ಷದಲ್ಲಿಯೇ ಹಾಳಾಗುತ್ತಿವೆ. ಕ್ಷೇತ್ರದ ಗ್ರಾಮಗಳಲ್ಲಿ ಆದ ಸಮುದಾಯ ಭವನ, ರಸ್ತೆಗಳು ಕಳಪೆಯಾಗಿದ್ದು, ಪ್ರಚಾರಕ್ಕೆ ಹೋದಾಗ ಜನರು ನಮ್ಮ ಗಮನಕ್ಕೆ ತಂದು ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಉತ್ತಮವಾಗಿದ್ದ ರಸ್ತೆಗಳನ್ನು ಕಾಮಗಾರಿ ನೆಪದಲ್ಲಿ ಹಾಳು ಮಾಡಿ ಬಿಲ್ ಪಾವತಿಸಲಾಗಿದೆ ಎಂದು ದೂರಿದರು.

ಸರ್ಕಾರ ಗುಣಮಟ್ಟದ ಕಾಮಗಾರಿಗಳಿಗಾಗಿ ಅವಶ್ಯವಿದ್ದಷ್ಟು ಅನುದಾನ ನೀಡಿದ್ದರೂ ಕಾಂಗ್ರೆಸ್ ಶಾಸಕರ ಆಡಳಿತ ವೈಖರಿಯಿಂದ ಕಾಮಗಾರಿ ಕಳಪೆಯಾಗಿವೆ. ಈ ನಿಟ್ಟಿನಲ್ಲಿ ಜನತೆ ಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಸನ್ನದ್ಧರಾಗಬೇಕು ಎಂದರು.

ಕ್ಷೇತ್ರದ ಅಲ್ಪಸಂಖ್ಯಾತರ, ಹಿಂದುಳಿದ ಜನತೆಗೆ ಕಾಂಗ್ರೆಸ್ ಶಾಸಕರು ಯಾವುದೇ ಮಹತ್ತರವಾದ ಕೊಡುಗೆ ನೀಡಿಲ್ಲ. ನಮ್ಮ ಅಧಿಕಾರ ಅವಧಿಯಲ್ಲಿ ಅನೇಕ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಸಲಾಗಿತ್ತು. 9 ವರ್ಷಗಳಿಂದ ಅತ್ಯಂತ ಶ್ರದ್ಧೆ, ನಿಷ್ಠೆಯಿಂದ ಬಿಜೆಪಿ ಸಂಘಟಿಸಿದ್ದೆ. ಪಕ್ಷ ಟಿಕೆಟ್ ನೀಡುವಲ್ಲಿ ತಪ್ಪು ನಿರ್ಧಾರ ಕೈಗೊಂಡಿದೆ. ಆದರೆ, ಪಕ್ಷದ ಎಲ್ಲ ಕಾರ್ಯಕರ್ತರು ನನ್ನ ಜತೆಗಿದ್ದು, ನನ್ನ ಸ್ವಾಭಿಮಾನಿ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದರು.

ನಾನು ರೈತ ಕುಟುಂಬದಿಂದ ಬಂದವನಾಗಿದ್ದು ರೈತರ ಸಂಕಷ್ಟ ಹತ್ತಿರದಿಂದ ಕಂಡಿದ್ದೆನೆ. ರೈತರಿಗೆ ಅನ್ಯಾಯವಾದಾಗ ಪ್ರತಿ ಹೋರಾಟದಲ್ಲೂ ಭಾಗಿಯಾಗಿದ್ದೇನೆ. ಬೈಲಹೊಂಗದಲ್ಲಿ 119 ದಿನಗಳ ಕಾಲ ನಡೆದ ಕಳಸಾ-ಬಂಡೂರಿ ಹೋರಾಟದ
ನೇತತ್ವವಹಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದರ ಲವಾಗಿ ಯೋಜನೆ ಕಾರ್ಯರೂಪ ಪಡೆದಿದೆ. ರೈತ ಮಗನ ಸ್ವಾಭಿಮಾನಿ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಿ, ನನ್ನ ಅನುಕ್ರಮ ಸಂಖ್ಯೆ 9 ರ ಸ್ವಾಭಿಮಾನಿ ರೈತನ ಚಿಹ್ನೆಗೆ ಮತ ನೀಡಿ ಅತ್ಯಧಿಕ ಮತಗಳಿಂದ ಗೆಲ್ಲಿಸಿ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ನೂರಾರು ಕಾರ್ಯಕರ್ತರು ಇದ್ದರು.

ನಮ್ಮ ಕಾರ್ಯಕರ್ತರ ಸ್ವಾಭಿಮಾನದ ಹೋರಾಟದ ಅಲೆಯಿಂದ ಕ್ಷೇತ್ರದಾದ್ಯಂತ ಸಂಚಲನ ಮೂಡಿ ನಮಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಇದರಿಂದ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದ್ದು, ಬೈಲಹೊಂಗಲದಲ್ಲಿ ಪ್ರಧಾನಿ ಮೋದಿ ಸಮಾವೇಶ ಆಯೋಜಿಸಲಾಗಿದೆ. ಯಾರೇ ಏನೇ ಆಟ ನಡೆಸಿದರೂ ಚನ್ನಮ್ಮ, ರಾಯಣ್ಣ, ಮಲ್ಲಮ್ಮಳ ನಾಡಿನಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಹೋರಾಟದ ಮೂಲಕ ಸಿಡಿದೇಳುವುದು ಹಿಂದಿನಿಂದಲೂ ಬಂದಿದೆ. ಯಾರಿಗೂ ಏನು ಅಲ್ಲಾಡಿಸಲು ಆಗುವುದಿಲ್ಲ.| ವಿ.ಐ.ಪಾಟೀಲ ಪಕ್ಷೇತರ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net