ಹೋರಾಟದ ಕಿಚ್ಚು ಯುವಜನರಿಗೆ ಸ್ಫೂರ್ತಿ

23,KHH-1P
Published on

ಕಾನಹೊಸಹಳ್ಳಿ: ಬ್ರಿಟಿಷರ ವಿರುದ್ಧ ಕಿತ್ತೂರು ಚನ್ನಮ್ಮ ಅವರ ಹೋರಾಟದ ಕಿಚ್ಚು ಇಂದಿನ ಯುವಜನರಿಗೆ ಸ್ಫೂರ್ತಿಯಾಗಿದೆ ಎಂದು ನಾಡಕಚೇರಿ ವಿಷಯ ನಿರ್ವಾಹಕಿ ಅನಿತಾ ಪೂಜಾರ್ ಹೇಳಿದರು.

ಗ್ರಾಮದ ನಾಡಕಚೇರಿಯಲ್ಲಿ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಅವರಿಗೆ ಪುತ್ರ ಸಂತಾನವಿಲ್ಲದ ಕಾರಣ ದತ್ತು ಮಗ ಪಡೆದಿದ್ದರು. ಇದರಿಂದಾಗಿ ಬ್ರಿಟಿಷರು ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾನೂನು ಜಾರಿಗೆ ತಂದರು. ಇದರ ವಿರುದ್ಧ ಧ್ವನಿ ಎತ್ತಿದ ನಾಡಿನ ಮೊದಲ ಸಂಸ್ಥಾನ ಕಿತ್ತೂರು ಅಗಿದ್ದು, ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ಕಾಯ್ದೆ ವಿರುದ್ಧ ಹೋರಾಟ ಮಾಡಿದ ಮೊದಲ ನಾರಿ ಕಿತ್ತೂರು ಚನ್ನಮ್ಮ ಆಗಿದ್ದಾರೆ ಎಂದರು.

ಕಿತ್ತೂರು ಚನ್ನಮ್ಮ ಅವರ ಜಯಂತಿಯನ್ನು ಒಂದು ಸಮುದಾಯಕ್ಕೆ ಸೀಮಿತವಾಗಿ ಆಚರಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಸರ್ಕಾರ ಎಲ್ಲ ಸಮುದಾಯದ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಜಯಂತಿ ಆಚರಣೆ ಮಾಡುವ ಮೂಲಕ ಧೀರ ಮಹಿಳೆಗೆ ಗೌರವ ನೀಡುವ ಕಾರ್ಯ ಮಾಡಬೇಕೆಂದರು.

ಗ್ರಾಮ ಲೆಕ್ಕಾಧಿಕಾರಿ ಅಜ್ಜಯ್ಯ, ಸಮುದಾಯದ ಮುಖಂಡ ಪೂಜಾರಹಳ್ಳಿ ಅಂಜಿನಪ್ಪ, ಕಚೇರಿ ಸಿಬ್ಬಂದಿ ಆಗ್ರಹಾರ ಮಂಜುನಾಥ, ಸಿದ್ದೇಶ್, ಬೋರಣ್ಣ, ಪಂಚಮಸಾಲಿ ಸಮುದಾಯದ ಪ್ರಮುಖರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net