

ಚಿತ್ರದುರ್ಗ: ಬಸವಾದಿ ಶರಣರು ಕಾಯಕಕ್ಕೆ ಒತ್ತು ಕೊಟ್ಟಿದ್ದರೆಂದು ಮೊಳಕಾಲ್ಮೂರು ಸಿದ್ದಯ್ಯನಕೋಟೆ ಚಿತ್ತರಗಿ ಸಂಸ್ಥಾನ ಶಾಖಾ ಮಠದ ಶ್ರೀ ಬ ಸವಲಿಂಗ ಸ್ವಾಮೀಜಿ ಹೇಳಿದರು.
ರಾಜ್ಯರೈತ ಸಂಘ, ಹಸಿರುಸೇನೆ ಒಕ್ಕೂಟ, ಪ್ರಗತಿಪರ ಸಂಘಟನೆಗಳಿಂದ ನಗರದ ರೈತ ಭವನದಲ್ಲಿ ಶುಕ್ರವಾರ, ಕೂಡಲ ಸಂಗಮ ಸುಕ್ಷೇತ್ರ ಬಸವಪೀಠದ 38 ನೇ ಶರಣ ಮೇಳ ಉತ್ಸವದಲ್ಲಿ ಒಕ್ಕಲಿಗ ಮುದ್ದಣ್ಣನವರ ನೆನಪಿನ ‘ಪ್ರಮುಖ ಪ್ರಜೆ’ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೈತ ಹೋರಾಟಗಾರ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹೋರಾಟಗಾರರಲ್ಲಿ ಛಲವಿರಬೇಕು. ಮಾಡಿದವರಿಗೆ ನೀಡು ಭಿಕ್ಷೆ ಎಂದಿರುವ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ, ಕೆರೆ, ಕ ಟ್ಟೆಗಳನ್ನು ಕಟ್ಟಿಸಿದ್ದಾರೆ. ಬಸವಣ್ಣ ಕಾಯಕವೇ ಕೈಲಾಸ ಎನ್ನುವ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಸಂಘಟನೆಯಿಂದ ಸರ್ಕಾರಗಳನ್ನು ಮ ಣಿಸಲು ಸಾಧ್ಯ. ಬಸವಣ್ಣ ಜಾತಿ ನಿರ್ಮೂಲನೆಗೆ ಹೋರಾಡಿದ್ದರೆ, ಇಂದಿನ ಸಮಾಜದಲ್ಲಿ ಜಾತೀಯತೆ ತಾಂಡವವಾಡುತ್ತಿದೆ. ಬಸವಾದಿ ಶರಣರ ವಚನ ಸಾಹಿತ್ಯವನ್ನು ಎಲ್ಲರೂ ಓದಲೇಬೇಕೆಂದರು.
ಚಿಂತಕ ಪ್ರೊ.ಜೆ.ಯಾದವರೆಡ್ಡಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತ ಅಸಂಘಟಿತ, ಅಸಹಾಯಕನಾಗಿದ್ದಾನೆ. ದೌರ್ಜನ್ಯ,ದಬ್ಬಾಳಿಕೆ ನಡೆದಾಗಲಾದರೂ ಭಿನ್ನಾಭಿಪ್ರಾಯ ಮರೆತು ಸಂಘಟಿತರಾಗಬೇಕಿದೆ ಎಂದರು.
ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ ಮಾತನಾಡಿ, ಬಸವಣ್ಣನವರ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಪ್ರೊ. ನಂ ಜುಂಡಸ್ವಾಮಿ ಅವರ ಆದರ್ಶಗಳನ್ನು ಅನುಸರಿಸಬೇಕಿದೆ. ಅನ್ಯಾಯದ ವಿರುದ್ಧ ಹೋರಾಟಕ್ಕಿಳಿಯಬೇಕು ಎಂದರು.
ಕಾರ್ಮಿಕ ಸಂಘಟನೆ ಜಿಲ್ಲಾ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು, ಅಭಿನಂದನೆ ಸ್ವೀಕರಿಸಿದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬೆಂಗಳೂರಿನ ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ವೀರೇಶ್ ಅಡನೂರು, ಕಾರ‌್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣಕುಮಾರ್, ರೈತ ಮುಖಂಡರಾದ ಚಿಕ್ಕಬ್ಬಿಗೆರೆ ನಾಗರಾಜ್, ಆರ್.ಬಿ.ನಿಜಲಿಂಗಪ್ಪ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಆರ್ ಎಸ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ರವಿ, ಕೆ.ಸಿ.ಹೊರಕೇರಪ್ಪ, ಹಳಿಯೂರು ಸಿದ್ದಪ್ಪ, ಮುದ್ದಾಪುರ ನಾಗರಾಜ್, ಮಂಜಣ್ಣ, ಕೆ.ಟಿ.ತಿಪ್ಪೇಸ್ವಾಮಿ, ರುದ್ರಸ್ವಾಮಿ, ರಾಜಶೇಖರ್ ನಾಯಕ್, ಧನಂಜಯ, ಹುಣಸೆಕಟ್ಟೆ ಕಾಂತರಾಜ್, ಬಾಗೇನಾಳ್ ತಿಪ್ಪೇಸ್ವಾಮಿ ಸಿದ್ದರಾಮಪ್ಪ ಮತ್ತಿತರ ರೈತ ಪ್ರಮುಖರು ಇದ್ದರು.