ಹೋರಾಟಗಾರರ ಹಿತಕ್ಕೆ ಆಡಳಿತ ಬದ್ಧ

09-08kodekal01
ಕ್ವಿಟ್ ಇಂಡಿಯಾ ಚಳವಳಿ ನೆನಪಿಗಾಗಿ ಕೊಡೇಕಲ್‌ನ ಸ್ವಾತಂತ್ರ್ಯ್ ಹೋರಾಟಗಾರ ಸಂಗಪ್ಪ ಮಂಟೆ ನಿವಾಸಕ್ಕೆ ಬುಧವಾರ ಜಿಲ್ಲಾಧಿಕಾರಿ ಡಾ.ಸುಶೀಲಾ ಭೇಟಿ ನೀಡಿ ಸಂಗಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು. ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಕಲ್ಲಪ್ಪ ಜಂಜಿಗಡ್ಡಿ, ಶಾಂತಗೌಡ, ಸಂಗಪ್ಪ ಶಿವಪುರ, ವೀರಸಂಗಪ್ಪ ಹಾವೇರಿ ಇತರರಿದ್ದರು.
Published on

ಕೊಡೇಕಲ್: ಸ್ವಾತಂತ್ರ್ಯ ಹೋರಾಟಗಾರರ ಹಿತ ಕಾಯಲು ಜಿಲ್ಲಾಡಳಿತ ಸದಾ ಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿ ವರ್ಷಾಚರಣೆ ಸವಿನೆನಪಿಗಾಗಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಅವರನ್ನು ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ವೀರರ ಆದರ್ಶ ಇಂದಿನ ಯುವಕರು ಮಾದರಿಯಾಗಿ ಸ್ವೀಕರಿಸಬೇಕು ಎಂದು ಹೇಳಿದರು.

ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ನಾಡ ಕಚೇರಿ ಉಪ-ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ , ಕಂದಾಯ ಇಲಾಖೆ ಶಾಂತಗೌಡ, ದೇವು ಚವ್ಹಾಣ್, ಅಪ್ಪಣ್ಣ ಗುಡಿಮನಿ, ಬಸವರಾಜ ಪೀರಾಪುರ, ವಿಜಯಲಕ್ಷ್ಮೀ, ಎಸ್ .ವಿ.ಮಹಲಿನಮಠ, ಪ್ರಭುಸ್ವಾಮಿ ಕೊಡೇಕಲ್ಮಠ, ಸಂಗಪ್ಪ ಶಿವಪುರ, ವಿ.ಎಸ್.ಹಾವೇರಿ, ಬಸವರಾಜ ಪಂಜಗಲ್, ಸಂಗಯ್ಯ ಮಂಟೆ, ಬಸಪ್ಪ ಮಂಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net