

ಶ್ರೀನಿವಾಸಪುರ: ಸ್ವಾತಂತ್ರ$್ಯ ಹೋರಾಟಗಾರರನ್ನು ಸ್ವಾತಂತ್ರ$್ಯ ದಿನಾಚರಣೆಯಂದು ಮಾತ್ರ ನೆನಪಿಸಿಕೊಳ್ಳುವುದಲ್ಲ. ನಿತ್ಯ ನೆನಪಿಸಿಕೊಳ್ಳಬೇಕು. ಹಿರಿಯರು ಈಗಿನ ಪೀಳಿಗೆಗೆ ಸ್ವಾತಂತ್ರ$್ಯ ಹೋರಾಟಗಾರರ ಕುರಿತು ಹೆಚ್ಚಾಗಿ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
75 ವರ್ಷದ ಅಮೃತ ಮೋಹತ್ಸವವನ್ನು ನಾವೆಲ್ಲರೂ ಈ ವರ್ಷ ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕಿದೆ. ನಾಡಿನಲ್ಲಿ ಅನೇಕ ಹೋರಾಟಗಾರರಿದ್ದು, ಕೆಲವರು ಇತಿಹಾಸದಲ್ಲಿ ಸೇರ್ಪಡೆಯಾಗಿದ್ದು, ಇನ್ನು ಕೆಲವರು ಎಲೆಮರಿ ಕಾಯಿಯಂತೆ ಇದ್ದಾರೆ. ತಾಲೂಕು ಆಡಳಿತ ಅಂತವರನ್ನ ಗುರುತಿಸಿ ಸನ್ಮಾನಿಸಬೇಕು ಎಂದರು.
ದೇಶಕ್ಕಾಗಿ ಹೋರಾಡಿದ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಒನಕೆ ಓಬ್ಬವ್ವ ಅವರ ಹೋರಾಟದ ಬಗ್ಗೆ ಮೆಲಕು ಹಾಕಿದರು. ಅವರ ಜೀವನ ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದರು.
ಮುಖ್ಯ ಭಾಷಣಕಾರ, ಪತ್ರಕರ್ತ ಅಜಿತ್ಶೆಟ್ಟಿ ಹಿರಂಜಿ ಮಾತನಾಡಿ, ದೇಶದಲ್ಲಿನ ಹಿಂದುಗಳನ್ನು ಪೂರ್ಚಗೀಸರು ಹಾಗೂ ಟಿಪ್ಪುಸುಲ್ತಾನ್ ಮತಾಂತರ ಮಾಡಿದಾಗ ವೀರ ಸಾರ್ವರ್ಕರ್ ಇವರ ವಿರುದ್ದ ಹೋರಾಟ ನಡೆಸಿದ ಫಲವಾಗಿ 5ವರ್ಷ ಸೆರವಾಸ ಅನುಭವಿಸಿ ಗ್ರಾಮಕ್ಕೆ ಹಿಂದುರುಗಿ ಸಾವಿರ ಸ್ವಯಂಸೇವಕರ ಸೇನೆಯನ್ನು ಸಿದ್ಧಪಡಿಸಿ ದೇಶದ ಸ್ವಾತಂತ್ರ$್ಯಕ್ಕಾಗಿ ಹೋರಾಟ ನಡೆಸಿದರು ಎಂದರು.
ಬಿಟ್ರಿಷರು ನಮಗೆ ಸ್ವಾತಂತ್ರ$್ಯ ಕೊಟ್ಟರೂ ರಾಜ್ಯದ ಶೇ. 40 ಪ್ರದೇಶಗಳಿಗೆ ಸ್ವಾತಂತ್ರ$್ಯ ಇರಲಿಲ್ಲ. ಹೈದರಾಬಾದಿನ ನವಾಬರು ರಾಜ್ಯದ ಹೈದರಾಬಾದ್ ಕರ್ನಾಟಕಕ್ಕೆ ಸ್ವಾತಂತ್ರ$್ಯ ೂಷಣೆ ಮಾಡದ ಸಮಯದಲ್ಲಿ ವೀರ ಸಾರ್ವರ್ಕರ್ ಅನ್ಯಾಯದ ವಿರುದ್ಧ ಹೋರಾಡಿದ್ದರು ಎಂದರು.
ಸ್ವಾತಂತ್ರ$್ಯ ಹೋರಾಟದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ ಹೋರಾಟಗಾರರ ಬಗ್ಗೆ, ಸ್ವಾತಂತ್ರ$್ಯ ಸಂಗ್ರಾಮದ ಬಗ್ಗೆ ಕನ್ನಡ ಸಂಸತಿ ಇಲಾಖೆಯಿಂದ ವಿಡಿಯೋ ಪ್ರದರ್ಶನ ಮಾಡಲಾಯಿತು.
ವಿದ್ಯಾರ್ಥಿಗಳಿಂದ ಸ್ವಾತಂತ್ರ$್ಯ ಹೋರಾಟಗಾರರ ವೇಷಭೂಷಣ ಪ್ರದರ್ಶನ ಹಾಗೂ ದೇಶ ಭಕ್ತಿ ಗೀತೆಗೆ ನೃತ್ಯ ಪ್ರದರ್ಶನ ನಡೆಯಿತು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಸ್ವಾತಂತ್ರ$್ಯ ಹೋರಾಟದಲ್ಲಿ ಭಾಗಿಯಾಗಿದ್ದ ತಾಲೂಕಿನ ಹೋರಾಟಗಾರರ ಕುಟುಂಬದವರಿಗೆ ಸನ್ಮಾನಿಸಲಾಯಿತು.
ತಹಸೀಲ್ದಾರ್ ಶರೀನಾತಾಜ್, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಇಒ ಎಸ್.ಆನಂದ್, ಪುರಸಭೆ ಅಧ್ಯೆ ಲಲಿತಾ ಶ್ರೀನಿವಾಸ್, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್, ಬಿಇಒ ಉಮಾದೇವಿ, ಸಿಐ ಜಿ.ಎಸ್.ನಾರಾಣಸ್ವಾಮಿ, ನೌಕರರ ಸಂದ ತಾಲೂಕು ಅಧ್ಯಕ್ಷ ಬಂಗವಾದಿ ನಾಗರಾಜ್, ವಲಯ ಅರಣ್ಯ ಅಧಿಕಾರಿ ಸುರೇಶ್ಬಾಬು, ಆರ್ಐ ಮುನಿರೆಡ್ಡಿ, ಗುರುರಾಜರಾವ್, ಅಂಬರೀಶ್ ಮತ್ತಿತರರಿದ್ದರು.
ರಸ್ತೆಗೆ ಹೋರಾಟಗಾರರ ಹೆಸರಿಡಿ: ಶ್ರೀನಿವಾಸಪುರದ ಯಾವುದಾದರೂ ಒಂದು ರಸ್ತೆಗೆ ಸ್ವಾತಂತ್ರ$್ಯ ಹೋರಾಟಗಾರರ ಹೆಸರನ್ನು ನಾಮಕರಣ ಮಾಡಲು ಪುರಸಭೆ ಅಧ್ಯಕ್ಷರು ಹಾಗೂ ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿ ವೆಂಕಟ್ರಾಜಾ ಸೂಚಿಸಿದರು.