ಹೋರಾಟಕ್ಕೆ ಎಐಡಿಎಸ್ಒ‌ ಬೆಂಬಲ

WhatsApp Image 2024-07-29 at 4.32.40 PM
Published on

‌ಬಳ್ಳಾರಿ : ಬಾಂಗ್ಲಾದೇಶದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹೋರಾಟನಿರತ ವಿದ್ಯಾರ್ಥಿಗಳ ಬೆಂಬಲವಾಗಿ ನಗರದ ಕೆಇಬಿ ವೃತ್ತದಲ್ಲಿ ಪ್ರತಿಭಟಿಸಲಾಯಿತು.
ಎಐಡಿಎಸ್‌‌ಒ ರಾಜ್ಯ ಉಪಾಧ್ಯಕ್ಷ ಅಭಯಾ ದಿವಾಕರ ಮಾತನಾಡಿ, ಕಳೆದ 20 ದಿನಗಳಿಂದಲೂ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಬಾಂಗ್ಲಾದೇಶದ ಸರ್ಕಾರವು ಪೈಶಾಚಿಕ ದಾಳಿಯನ್ನು ನಡೆಸುತ್ತಿದೆ. ಇದುವರೆಗಿನ ಹೋರಾಟದಲ್ಲಿ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹುತಾತ್ಮ ರಾಗಿದ್ದಾರೆ. ಆಡಳಿತ ಸರ್ಕಾರವು ಸಮಸ್ಯೆಯನ್ನು ಪ್ರಜಾತಾಂತ್ರಿಕವಾಗಿ ಬಗೆಹರಿಸುವುದರ ಬದಲಾಗಿ ವಿದ್ಯಾರ್ಥಿಗಳ ಹೋರಾಟವನ್ನು ಹತ್ತಿಕ್ಕುವ ಫ್ಯಾಸಿಸ್ಟ್ ಕ್ರಮಗಳನ್ನು ಕೈಗೊಂಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟ ನಿರತ ವಿದ್ಯಾರ್ಥಿಗಳು ಕೇವಲ ಒಂದು ಬೇಡಿಕೆಗೆ ಬೀದಿಗೆ ಬಂದಿಲ್ಲ, ಬದಲಾಗಿ ವ್ಯವಸ್ಥೆಯ ಲೋಪವನ್ನು ಬಯಲಿಗೆಳೆಯಲು ಬಂದಿರುವುದನ್ನು ನಾವು ಗ್ರಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಗಡಿಗಳನ್ನು ಮೀರಿ ಹುತಾತ್ಮ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸುತ್ತಾ, ಹೋರಾಟ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು ನಮ್ಮ ಜವಾಬ್ದಾರಿಯಾಗುತ್ತದೆ ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net