ಹೋಮ್‌ಗಾರ್ಡ್ ಆತ್ಮಹತ್ಯೆ

Homeguard suicide
ಮೃತ ಗೃಹರಕ್ಷಕ ಶಿವಾನಂದ ಚೌಧರಿ
Published on

ಸಿಂದಗಿ: ಗೃಹರಕ್ಷಕ ದಳದ ನೌಕರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಬಂದಾಳ ಹೊರವಲಯದಲ್ಲಿನ ಬಸವಣ್ಣ ದೇವಸ್ಥಾನದ ಬಳಿ ಸೋಮವಾರ ಸಂಜೆ ಸಂಭವಿಸಿದೆ.

ಮೃತನನ್ನು ಬೂದಿಹಾಳ ಪಿ.ಎಚ್., ಗ್ರಾಮದ ಗೃಹರಕ್ಷಕ(ಹೋಮ್‌ಗಾರ್ಡ್) ಶಿವಾನಂದ ಚೌಧರಿ (42) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಶಿವಾನಂದ ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ ವಾಟ್ಸ್ ಆ್ಯಪ್ ಸ್ಟೇಟಸ್ ಮೂಲಕ ಹರಿಬಿಟ್ಟಿದ್ದು, ಈ ವಿಡಿಯೋದಲ್ಲಿ, ತನ್ನ ಮೂವರು ಮಕ್ಕಳು ಪರದೇಶಿ ಆದರೂ ಚಿಂತೆಯಿಲ್ಲ. ಅವಳಿಗೆ ಶಿಕ್ಷೆ ಕೊಡಿಸಿ, ಭಾಳ ಜಾಬಾದ ಹೆಣ್ಣವಳು. ಒಂದು ಬೆರಳಿನ ಉಗುಳು, ಇನ್ನೊಂದು ಬೆರಳಿಗೆ ಹಚ್ಚುವ ಚಾಲಾಕಿ ಅವಳು. ಗುಣ ಒಳ್ಳೇಯದಿರಬೇಕು. ಮನೆಯವರು ಹೇಳಿದರೂ ಕೇಳದೇ ಹೋದೆ, ಅದಕ್ಕೆ ನನ್ನ ಮರ್ಯಾದಿ ಕಳೆದಳು. ನಾ ಅವಳಿಗೆ ಎಷ್ಟೋ ದುಡ್ಡು ಕೊಟ್ಟಿರುವೆ. ನನ್ನ ಸಾವಿಗೆ ಶ್ರೀದೇವಿ ಸೋಮು ಮುರಾಳ ಅವಳೇ ಕಾರಣ ಸರ್. ನಾನು ಕಳೆದುಕೊಂಡ ದುಡ್ಡು, ನನ್ನ ಮಕ್ಕಳಿಗೆ ತಲುಪಲಿ ಸಾಕು ಸರ್ ಎಂದು ಹೇಳಿದ್ದಾನೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net