ಹೋಮದಿಂದ ಮಾನಸಿಕ ನೆಮ್ಮದಿ

30-6
ಬೈಲಹೊಂಗಲದ ಶ್ರೀ ಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂರ್ಣಾಹುತಿ ಯಾಗ ಜರುಗಿತು. ಮುಕ್ತಾರ್ ಪಠಾಣ, ಹಬೀಬ್ ಶಿಲೇದಾರ, ಡಾ.ಮಹಾಂತಯ್ಯ ಶಾಸ್ತ್ರೀ, ಸಿದ್ಧರಾಮ ಲಿಂಗಶೆಟ್ಟಿ, ಕುಮಾರ ರೇಶ್ಮಿ ಇತರರು ಇದ್ದರು.
Published on

ಬೈಲಹೊಂಗಲ, ಬೆಳಗಾವಿ: ಎಲ್ಲ ಧರ್ಮಗಳು ಒಂದೇ ಆಗಿವೆ. ಆಚರಣೆಗಳು ಮಾತ್ರ ಬೇರೆ ಬೇರೆಯಾಗಿವೆ. ಅನಾದಿ ಕಾಲದಿಂದಲೂ ಹೋಮ- ಹವನಗಳನ್ನು ಮಾಡುವುರಿಂದ ದೈಹಿಕ ಮತ್ತು ಮಾನಸಿಕ ನೆಮ್ಮದಿ ಲಭಿಸಿ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ ಎಂದು ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷ ಮುಕ್ತಾರ್ ಪಠಾಣ, ಯುವ ಕಾಂಗ್ರೆಸ್ ಮುಖಂಡ ಹಬೀಬ್ ಶಿಲೇದಾರ ಹೇಳಿದರು.

ಪಟ್ಟಣದ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಗುರುವಾರ ಮೂರನೆಯ ದಿನದ ಕಾರ್ಯಕ್ರಮದಲ್ಲಿ ಪೂರ್ಣಾಹುತಿಯಾಗದಲ್ಲಿ ಅವರು ಮಾತನಾಡಿದರು. ದೇವಸ್ಥಾನದ ಡಾ.ಮಹಾಂತಯ್ಯ ಶಾಸ್ತ್ರೀ ಅವರು ಎಲ್ಲ ಧರ್ಮಿಯರನ್ನು ಸಮನಾಗಿ ಕಾಣುವ ಅಪರೂಪದ ವ್ಯಕ್ತಿತ್ವ ಹೊಂದಿದ್ದಾರೆ ಎಂದರು.

ಡಾ.ಮಹಾಂತಯ್ಯ ಶಾಸ್ತ್ರೀ ಮಾತನಾಡಿ, ಮಾನವನ ಶರೀರದ ಮೇಲೆ ಆಗುವ ಅನೇಕ ತರದ ಶರೀರವಾದೆಗಳು, ಶತ್ರು ಭಾದೆಗಳು ಹಾಗೂ ಕೌಟುಂಬಿಕ ಸಮಸ್ಯೆ ಇರುವಂತಹ ವ್ಯಕ್ತಿಗಳು ವಿಶೇಷವಾಗಿ ಮಹಾ ಚಂಡಿಕಾ ಯಾಗವನ್ನು ಮಾಡುವುದು ಸನಾತನವಾಗಿ ಬಂದಿದೆ. ನವರಾತ್ರಿ ನಿಮಿತ್ತ 9 ದಿನಗಳ ಪರ್ಯಂತ ಚಂಡಿಕಾ ಯಾಗವನ್ನು ಶಾಸ್ತ್ರೋಕ್ತವಾಗಿ ಮಾಡಲಾಗುತ್ತಿದೆ ಎಂದರು.

ನವರಾತ್ರಿ ಅಂಗವಾಗಿ ಮುಸ್ಲಿಂ ಸಮಾಜದ ಮುಖಂಡರು ಹೋಮ, ಹವನ, ಪೂರ್ಣಾಹುತಿಯಾಗದಲ್ಲಿ ಪಾಲ್ಗೊಂಡು ದೇವಿಯ ನಾಮಾವಳಿ ಪಠಿಸಿ, ನಾಡಿಗೆ ಶಾಂತಿ ಸಂದೇಶ ಸಾರಿ, ಭಾವೈಕ್ಯತೆ ಸಂದೇಶ ಸಾರಿದರು.

ಮುಕ್ತಾರ ಪಠಾಣ ದಂಪತಿ ಹಾಗೂ ಹಬೀಬ್ ಶಿಲೇದಾರ ಅವರನ್ನು ಸತ್ಕರಿಸಲಾಯಿತು.
ಸಿದ್ಧರಾಮ ಲಿಂಗಶೆಟ್ಟಿ, ಕುಮಾರ ರೇಶ್ಮಿ, ಪ್ರೀತಿ ಆರಾದ್ರಿಮಠ, ಬಸವರಾಜ ಕಟ್ಟಿಮನಿ, ಪ್ರಶಾಂತ ಶಾಸ್ತ್ರೀ, ಶರಣಯ್ಯ ಶಾಸ್ತ್ರೀ, ವಿನಯ ನಂದಿಹಳ್ಳಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net