ಹೋಮ ಮಾಡಿದ್ದವರ ವಿರುದ್ಧ ದೂರು

2525
Published on

ಬೆಳಗಾವಿ: ಕೋವಿಡ್-19 ನಿಯಂತ್ರಣ ಮಾರ್ಗಸೂಚಿ ಉಲ್ಲಂಸಿ ಹೋಮ ಮಾಡಿದ್ದ ನಾಲ್ವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕ ಶಿವಾನಂದ ಭೋಸಲೆ ಶುಕ್ರವಾರ ದೂರು ದಾಖಲಿಸಿದ್ದಾರೆ. ಹೋಮ ನೆರವೇರಿಸಿದ್ದ ಸುನೀಲ ಮುತಗೇಕರ, ಕಲ್ಲಪ್ಪ ಶಹಾಪುರಕರ, ಜಯಂತ ಜಾಧವ, ಗಿರೀಶ ಧೊಂಗಡಿ ವಿರುದ್ಧ ದೂರು ದಾಖಲಾಗಿದೆ.

ಶಹಾಪುರದ ಬಸವಣ್ಣ ಮಂದಿರ ಎದುರು ಮೇ 24ರಂದು ಈ ನಾಲ್ವರು ಕರೊನಾ ನಿಯಂತ್ರಣಕ್ಕಾಗಿ ಸರ್ಕಾರಿ ಮಾರ್ಗಸೂಚಿ ಉಲ್ಲಂಸಿ, ಸಾರ್ವಜನಿಕರನ್ನು ಗುಂಪುಗೂಡಿಸಿದ್ದರು. ದೈಹಿಕ ಅಂತರ ಕಾಯ್ದುಕೊಳ್ಳದೆ ಹೋಮ ಮಾಡಿದ್ದಾರೆ ಎಂದು ದೂರಿನಲ್ಲಿ ಭೋಸಲೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net