

ಅರಕಲಗೂಡು: ತಾಲೂಕಿನ ಬೈಚನಹಳ್ಳಿ ಗ್ರಾಮಾಂತರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಕಸಬಾ ಹೋಬಳಿ-2 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ನಿಂಗಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಿಕ್ಷಣ ಸಂಯೋಜಕ ಚಂದ್ರಶೇಖರ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಸಂಪನ್ಮೂಲ ವ್ಯಕ್ತಿ ನಯಾಜ್ ಉಲ್ಲಾ, ಮುಖ್ಯ ಶಿಕ್ಷಕ ಯಾಸ್ಮಿನ್ ತಾಜ್, ಹಿರಿಯ ಶಿಕ್ಷಕ ಜಗದೀಶ್, ಸಹ ಶಿಕ್ಷಕರಾದ ರೋಷನ್ ಅರ, ಪರಮೇಶ್, ದಿವ್ಯಾಮಣಿ, ಅತಿಥಿ ಶಿಕ್ಷಕಿ ರಮ್ಯಾ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.
ಶಣವಿನಕುಪ್ಪೆ ಮತ್ತು ಅತ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು. ವಿವಿಧ 17 ಶಾಲೆಯ ಮಕ್ಕಳು ಖೋ ಖೋ, ಕಬಡ್ಡಿ, ಥ್ರೋ ಬಾಲ್, ವಾಲಿಬಾಲ್, ಗುಂಪು ಕ್ರೀಡೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.