ಹೋಟೇಲ್ ಸಪ್ಲೈಯರ್‌ಗೆ ಚಾಕು ಇರಿತ

Published on

ಚಾಮರಾಜನಗರ: ತಾಲೂಕಿನ ಗಡಿಯಲ್ಲಿರುವ ಎಲ್ಲೆಕಟ್ಟೆ ಗ್ರಾಮದ ಸಮೀಪದ ಹೋಟೇಲ್‌ನಲ್ಲಿ ಇಬ್ಬರು ಆರೋಪಿಗಳು ಸಪ್ಲೈಯರ್‌ಗೆ ಚಾಕು ಇರಿದಿದ್ದಾರೆ.

ಗುಮಟಾಪುರ ಗ್ರಾಮದ ಸುರೇಶ್ ಚಾಕು ಇರಿತಕ್ಕೆ ಒಳಗಾಗಿರುವ ಗಾಯಾಳು. ತಾಳವಾಡಿಯ ಸಿದ್ದರಾಜು ಮತ್ತು ಕೃಷ್ಣ ಚಾಕು ಇರಿದಿರುವ ಆರೋಪಿಗಳು. ಹೋಟೇಲ್‌ನಲ್ಲಿ ಭಾನುವಾರ ಊಟ ಕೇಳಿದ್ದಕ್ಕೆ ಸಪ್ಲೈಯರ್ ಸುರೇಶ್ ಇಲ್ಲವೆಂದಿದ್ದಾರೆ. ಇದಕ್ಕೆ ಕೋಪಗೊಂಡು ಸಿದ್ದರಾಜು ಮತ್ತು ಕೃಷ್ಣ ಚಾಕು ಇರಿದಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಸುರೇಶ್ ಚಾ.ನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net