ಹೋಟೆಲ್‌ಗೆ ನುಗ್ಗಿದ ಲಾರಿ : 9 ಬೈಕ್, 1ಕಾರು ಜಖಂ

knk
Published on

ಕುಕನೂರು (ಕೊಪ್ಪಳ): ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಹೋಟೆಲ್ ಮೇಲೆ ಲಾರಿ ಹರಿದಿದ್ದು, 9 ಬೈಕ್, ಒಂದು ಕಾರ್ ಜಖಂಗೊಂಡಿದೆ.


ಕುಡಿದ ಮತ್ತಿನಲ್ಲಿ ಲಾರಿ ಓಡಿಸುತ್ತಿದ್ದ ಚಾಲಕ ನಿಯಂತ್ರಣ ತಪ್ಪಿ ಏಕಾಏಕಿ ಹೋಟೆಲ್ ಕಡೆ ನುಗ್ಗಿದ್ದಾನೆ. ಸಿನಿಮಿಯ ರೀತಿಯಲ್ಲಿ ಲಾರಿ ಗುದ್ದಿದ್ದು, ಲಾರಿ ವೇಗವಾಗಿ ಬರುತ್ತಲೇ ಜನ ಎರ‌್ರಾಬಿರ‌್ರಿಯಾಗಿ ಓಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿದ್ದ 9 ಬೈಕ್ ಮತ್ತು ಒಂದು ಮಾರುತಿ ಕಾರ್‌ಗೆ ಹಾನಿಯಾಗಿದೆ. ಬೈಕ್‌ಗಳು ಲಾರಿ ಚಕ್ರಕ್ಕೆ ಸಿಲುಕು ನುಜ್ಜುಗುಜ್ಜಾಗಿವೆ. ಅಜಾಗರೂಕತೆಯಿಂದ ಚಾಲನೆ ಮಾಡಿದ ಚಾಲಕನನ್ನು ಹಿಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net