

ಕಲಬುರಗಿ: ನಗರದ ಖಾಸಗಿ ಹೋಟೆಲ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಮೃತಪಟ್ಟು, ಸುಮಾರು ೯ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ. ಹೋಟೆಲ್ ಮುಖ್ಯಸ್ಥರು ಎಲ್ಲ ಕಾರ್ಮಿಕರ ಕುಟುಂಬಕ್ಕೆ ತಲಾ ೫ ಲP್ಷÀ ರೂ. ಪರಿಹಾರ ನೀಡಬೇಕು ಎಂದು ಕಲ್ಯಾಣ ಕರ್ನಾಟಕ ಸೇನೆ ಅಧ್ಯP್ಷÀ ದತ್ತು ಹೈಯಾಳಕರ್ ಆಗ್ರಹಿಸಿದರು. ಚಿಕಿತ್ಸೆಯ ಸಂಪೂರ್ಣ ಖರ್ಚು ಹೋಟೆಲ್ ಮಾಲೀಕರು ನೋಡಿಕೊಳ್ಳಬೇಕು. ತಿಂಗಳ ವೇತನ ಕುಟುಂಬದವರಿಗೆ ನಿರಂತರ ನೀಡಬೇಕು. ಜಿ¯್ಲÁಡಳಿತ ಸ್ಫೋಟಕ್ಕೆ ಕಾರಣ ಏನೆಂಬುದರ ಬಗ್ಗೆ ತನಿಖೆ ನಡೆಸಬೇಕು. ಗ್ಯಾಸ್ ಏಜೆನ್ಸಿಯವರ ನಿರ್ಲP್ಷÀ್ಯದಿಂದ ಈ ಘಟನೆ ಸಂಭವಿಸಿದರೆ, ಆ ಏಜೆನ್ಸಿಯ ಮಾನ್ಯತೆ ರದ್ದುಗೊಳಿಸಿ ಕ್ರಮ ಕೈಗೊಳ್ಳಬೇಕು. ಗಾಯಾಳು ಕಾರ್ಮಿಕರಿಗೆ ಸರ್ಕಾರದಿಂದ ತಲಾ ೫ ರೂ. ಪರಿಹಾರ ಘೋಷಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ರಮೇಶ ಬೀದರಕರ್, ಅಭಯ ಪ್ರಕಾಶ, ವೆಂಕಟೇಶ ಮಹಾರಾಜರು, ಬಸವರಾಜ, ದೇವು, ರಾಮು ಇತರರಿದ್ದರು.