ಹೋಂಸ್ಟೇಗಳಿಗೆ ರಾಜ್ಯಸರ್ಕಾರದ ನಿಯಮ ಪಾಲಿಸಲು ಒತ್ತಾಯ

30 ckm 6
ಚಿಕ್ಕಮಗಳೂರು ಡಿಸಿ ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದ ಹೋಂ ಸ್ಟೇ ಆಸೋಸಿಯೇಷನ್ ಪದಾಧಿಕಾರಿಗಳು ಹೋಂಸ್ಟೇಗಳಿಗೆ ರಾಜ್ಯಸರ್ಕಾರದ ನಿಯಮ ಪಾಲಿಸಲು ಒತ್ತಾಯಿಸಿದರು. ಎನ್.ಆರ್.ತೇಜಸ್ವಿ, ಅನ್ಸರ್ ಜೂಹರ್, ರೇಷ್ಮಾ, ವೇಣುಗೋಪಾಲ್, ಸುಲ್ತಾನ್ ಅಹ್ಮದ್, ಪ್ರದೀಪ್, ತೇಜಸ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೋಂಸ್ಟೇಗಳ ನೋಂದಣಿಗಾಗಿ ರಾಜ್ಯಸರ್ಕಾರದ ಸೂಚನಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ತೇಜಸ್ವಿ, ರಾಜ್ಯ ಸರ್ಕಾರ ರೂಪಿಸಿದ ಅತಿಥಿ ಕರ್ನಾಟಕ ಹೋಂಸ್ಟೇ ಯೋಜನೆ ಗೆಜೆಟ್ ಅಧಿಸೂಚನೆಯಂತೆ ವಾಣಿಜ್ಯೇತರ ಘಟಕ ಎಂದಿದೆ. ಹೋಂಸ್ಟೇಗಳ ಮಾಲೀಕರು ಆಸ್ತಿಗಳನ್ನು ಅನ್ಯಕ್ರಾಂತಗೊಳಿಸಬಾರದು, ಐಷರಾಮಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದರು.

ಆದರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂಸ್ಟೇಗಳಿಗೆ ನೋಂದಣಿಗಾಗಿ ಅನ್ಯಕ್ರಾಂತ ಕಡ್ಡಾಯ ಮಾಡಲಾಗಿದೆ. ನಗರಸಭೆ, ಪುರಸಭೆ, ಪಪಂ ಹಾಗೂ ಗ್ರಾಪಂ ಮಟ್ಟದಲ್ಲಿ ನಿರಾಕ್ಷೇಪಣಾ ಪತ್ರವನ್ನು ನೀಡಲು ಹೋಂಸ್ಟೇ ಮಾಲೀಕರಿಗೆ ಅಧಿಕ ಮೊತ್ತ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ತಿಳಿಸಿದರು.

ಆ ನಿಟ್ಟಿನಲ್ಲಿ ಹೋಂಸ್ಟೇ ನೋಂದಣಿ ಸಂಬAಧ ರಾಜ್ಯಸರ್ಕಾರ ಪತ್ರದ ಪ್ರಕಾರ ಅನ್ಯಕ್ರಾಂತ ಅವಶ್ಯಕತೆ ಇರುವುದಿಲ್ಲ ಹಾಗೂ ನಿಗಧಿತ ಏಕರೂಪದ ಶುಲ್ಕವನ್ನು ನಿಗಧಿಗೊಳಿಸುವುದು ಸೂಕ್ತ. ಇತ್ತೀಚೆಗೆ ಕೊಡುಗು ಜಿಲ್ಲಾಧಿಕಾರಿಗಳು ರಾಜ್ಯಸರ್ಕಾರದ ನಿಯಮಗಳ ಪ್ರಕಾರ ಪ್ರವಾಸೋದ್ಯಮಕ್ಕೆ ಆದೇಶವನ್ನು ಹೊರಡಿಸಿದ್ದು ಅದರಂತೆ ಜಿಲ್ಲೆಯಲ್ಲೂ ರಾಜ್ಯಸರ್ಕಾರದ ನಿಯಮ ಪಾಲಿಸುವಂತೆ ಆದೇಶಿಸಬೇಕು ಎಂದರು.

ವಿದ್ಯುಚ್ಚಕ್ತಿ ಮತ್ತು ನೀರಿನ ಶುಲ್ಕಗಳನ್ನು ಗೃಹ ಬಳಕೆಯ ದರದಲ್ಲಿ ಹಾಗೂ ವಸತಿ ಉz್ದೆÃಶಗಳಿಗೆ ನಿರ್ದಿಷ್ಟಪಡಿಸಿರುವಂತೆ ಆಸ್ತಿ ತೆರಿಗೆ ದರಗಳನ್ನು ವಿಧಿಸಬೇಕು. ಹೋಂಸ್ಟೇಯನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಬಾರದು. ಹೆಚ್ಚುವರಿ ತೆರಿಗೆ ವಿಧಿಸದಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಹೋಂಸ್ಟೇ ನಡೆಸಲು ನಿರಾಕ್ಷೇಪಣಾ ಪತ್ರ ನೀಡಲು ಗರಿಷ್ಟ ರೂ.೫೦೦ ಗಳ ಶುಲ್ಕವನ್ನು ಮಾತ್ರ ಹಾಗೂ ಇತರೆ ಶಾಸನಬದ್ಧ ತೆರಿಗೆಗಳನ್ನು ನಿಯಮಾನುಸಾರ ವಿಧಿಸಲು ಕ್ರಮವಹಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ವಿವರಿಸಲಾಗಿರುವ ಹೋಂಸ್ಟೇಗಳ ವ್ಯಾಖ್ಯಾನವನ್ನು ಪೂರೈಸುವ ವಸತಿ ಘಟಕಗಳು ಭೂ ಉಪಯೋಗ ಬದಲಾವಣೆಯನ್ನು ಕೈಗೊಳ್ಳಬೇಕಾಗಿರುವುದಿಲ್ಲ ಎಂದು ನಿರ್ದೇಶನ ನೀಡಬೇಕು ಎಂದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಸೋಸಿಯೇಷನ್‌ನ ಕಾರ್ಯದರ್ಶಿ ಅನ್ಸರ್ ಜೂಹರ್, ವಿವಿಧ ಹೋಂಸ್ಟೇ ಮಾಲೀಕರಾದ ರೇಷ್ಮಾ, ವೇಣುಗೋಪಾಲ್, ಸುಲ್ತಾನ್ ಅಹ್ಮದ್, ಪ್ರದೀಪ್, ತೇಜಸ್, ಸುಜಯ್, ದೀರಜ್, ಅಜಯ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net