ಹೊಸಹುಂಡಿಯಲ್ಲಿ ಹೋರಿ ಕಳವು

Ksd_Temple Theft
Published on

ಮೈಸೂರು: ತಾಲೂಕಿನ ಹೊಸಹುಂಡಿಯಲ್ಲಿ ಹೋರಿಯನ್ನು ನಾಲ್ವರು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.

ಗ್ರಾಮಸ್ಥರು ಹೋರಿಯನ್ನು ದೇವರಿಗೆಂದು ಬಸವನ ರೂಪದಲ್ಲಿ ಬಿಟ್ಟಿದ್ದರು. ಎಲ್ಲರ ಮನೆಯಲ್ಲಿ ಅದಕ್ಕೆ ಮೇವು ನೀಡಲಾಗುತ್ತಿತ್ತು. ಮಾ.17ರಂದು ಇದು ನಾಪತ್ತೆಯಾಗಿತ್ತು.

ಯಾರೋ ನಾಲ್ವರು ಗೂಡ್ಸ್ ಆಟೋದಲ್ಲಿ ಕದ್ದೊಯ್ದಿದ್ದಾರೆ ಎಂದು ಗ್ರಾಮದ ರಮೇಶ್ ದೂರು ನೀಡಿದ್ದು, ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net