ಹೊಸಬರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿ

3Ravig5-web
ಸುದ್ದಿಗೋಷ್ಠಿಯಲ್ಲಿ ರಾಜೇಂದ್ರ ಪಾಟೀಲ ಮಾತನಾಡಿದರು. ಸಿ.ಬಿ.ಪಾಟೀಲ ಹಾಗೂ ಅರ್ಜುನ ಗುಡ್ಡದ ಇದ್ದರು.
Published on

ಬೆಳಗಾವಿ: ಒಂದು ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ಸೀಮಿತವಾಗಬಾರದು. ಈಗಾಗಲೇ ಅಶೋಕ ಪಟ್ಟಣ ಅವರಿಗೆ ನಾಲ್ಕು ಬಾರಿ ಟಿಕೆಟ್ ನೀಡಿದ್ದು, ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿದ್ದಾರೆ. ಅಲ್ಲದೆ ಅವರ ತಂದೆ ತಾಯಿ ಕೂಡ ಶಾಸಕರಾಗಿದ್ದರು. ಕಾರ್ಯಕರ್ತರ ಹೆಸರನ್ನೇ ಗುರುತಿಸದ ಅಶೋಕ ಪಟ್ಟಣಗೆ ಮತ್ತೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಮುಖಂಡ ರಾಜೇಂದ್ರ ಪಾಟೀಲ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು, ಸಿದ್ದರಾಮಯ್ಯ ಅವರೇ ಸಿಎಂ ಅಗಬೇಕು ಎಂಬ ಆಸೆ ನಮಗೂ ಇದೆ. ಆದರೆ ಅಶೋಕ ಪಟ್ಟಣ ಅವರಿಗೆ ಟಿಕೆಟ್ ಸಿಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದು ನಮ್ಮ ಮನಸ್ಸಿಗೆ ನೋವಾಗಿದೆ. ಅರ್ಜಿ ಸಲ್ಲಿಸಿದ ಆರು ಮಂದಿ ಪೈಕಿ ಪಟ್ಟಣ ಹೊರತುಪಡಿಸಿ ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಚುನಾವಣೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುತ್ತೇವೆ ಎಂದರು. ಸಿ.ಬಿ. ಪಾಟೀಲ ಮಾತನಾಡಿ, ರಾಮದುರ್ಗ ಕ್ಷೇತ್ರ ಸಿದ್ದರಾಮಯ್ಯ ಮೀಸಲು ಕ್ಷೇತ್ರ ಎಂದು ಘೋಷಿಸಿ ಬೇರೆ ಯಾರೂ ಅರ್ಜಿ ಹಾಕದಂತೆ ಮೊದಲೇ ಪಕ್ಷದಿಂದ ಸೂಚನೆ ನೀಡಬೇಕಿತ್ತು. 2 ಲಕ್ಷ ರೂ. ತುಂಬಿ ಅರ್ಜಿ ಹಾಕಿ, ಪಕ್ಷ ಸಂಘಟನೆಗಾಗಿ ನಾವೆಲ್ಲ ದುಡಿಯುತ್ತಿದ್ದೇವೆ. ಆ ಸಮಯದಲ್ಲಿ ಅಶೋಕ ಪಟ್ಟಣ ಅವರಿಗೆ ಟಿಕೆಟ್ ಸಿಗುತ್ತದೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಅರ್ಜುನ ಗುಡ್ಡದ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net