ಹೊಸನಗರದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು

ಹೊಸನಗರ ಸಮೀಪ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೆ.ವಿ.ಸುಬ್ರಹ್ಮಣ್ಯ, ಉಮೇಶ್, ಟಿ.ಡಿ.ಮೇಘರಾಜ್ ಇತರರಿದ್ದರು.
ಹೊಸನಗರ ಸಮೀಪ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೆ.ವಿ.ಸುಬ್ರಹ್ಮಣ್ಯ, ಉಮೇಶ್, ಟಿ.ಡಿ.ಮೇಘರಾಜ್ ಇತರರಿದ್ದರು.
Published on

ಹೊಸನಗರ: ಹೊಸನಗರ ತಾಲೂಕಿನ ಇತಿಹಾಸ, ಪ್ರಾಕೃತಿಕ ಶ್ರೀಮಂತಿಕೆ ಗಮನ ಸೆಳೆಯುವಂತಿದ್ದು, ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಮಾಡಲಾಗುವುದು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನಲ್ಲಿ ಹಾದು ಹೋಗುವ ರಾಣೆಬೆನ್ನೂರು-ಬೈಂದೂರು 766ಸಿ ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸೇತುವೆ ಕಾಮಗಾರಿ ಪರಿಶೀಲಿಸಿ ಮಾತನಾಡಿ, ತಾಲೂಕಿನಲ್ಲಿ ಉತ್ತಮ ಪ್ರಕೃತಿ ಇದೆ. ಕೊಲ್ಲೂರು ಕೊಡಚಾದ್ರಿ ಕೇಬಲ್ ಕಾರ್ ಅಭಿವೃದ್ಧಿ, ಜೈನ ಟೆಂಪಲ್ ಸರ್ಕ್ಯೂಟ್ ಮೂಲಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಶರಾವತಿ ನದಿಗೆ ಅಡ್ಡಲಾಗಿ ಹೆದ್ದಾರಿ ಬೈಪಾಸ್ ರಸ್ತೆಗೆ ಅನುಗುಣವಾಗಿ 80 ಕೋಟಿ ರೂ. ವೆಚ್ಚದಲ್ಲಿ 1.5 ಕಿ.ಮೀ ಉದ್ದದ ಸೇತುವೆ ಕಾಮಗಾರಿ ನಡೆಯುತ್ತಿದೆ. ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಬೈಪಾಸ್ ವ್ಯವಸ್ಥೆಯಿಂದ ಕೊಲ್ಲೂರು ಸಂಪರ್ಕ ಇನ್ನಷ್ಟು ಹತ್ತಿರವಾಗಲಿದೆ. ಈ ಹಿಂದೆ ಗುರುತಿಸಿದ್ದ ಹೆದ್ದಾರಿಯಲ್ಲಿ 120 ತಿರುವು ಇದ್ದು, ಹೊಸನಗರದಿಂದ ಅಡಗೋಡಿಗೆ ಕ್ರಮಿಸಲು 2 ತಾಸು ಬೇಕಿತ್ತು. ಬೈಪಾಸ್‌ನಿಂದ ಅರ್ಧ ತಾಸಿನಲ್ಲಿ ಅಡಗೋಡಿ ತಲುಪಬಹುದು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ.ಸುಬ್ರಹ್ಮಣ್ಯ, ಪಪಂ ಮಾಜಿ ಅಧ್ಯಕ್ಷ ಉಮೇಶ್, ತಾಪಂ ಮಾಜಿ ಅಧ್ಯಕ್ಷ ಆಲವಳ್ಳಿ ವೀರೇಶ್, ಜಿಪಂ ಮಾಜಿ ಸದಸ್ಯ ಸುರೇಶ ಸ್ವಾಮಿರಾವ್, ಪ್ರಮುಖರಾದ ಟಿ.ಡಿ.ಮೇಘರಾಜ್, ಎಂ.ಎನ್.ಸುಧಾಕರ್, ಬಿ.ಯುವರಾಜ, ಎನ್.ಆರ್.ದೇವಾನಂದ್, ಎಚ್.ಆರ್.ತೀರ್ಥೇಶ್, ಕೆ.ವಿ.ಕೃಷ್ಣಮೂರ್ತಿ, ಗಣಪತಿ, ಆನಂದ, ಚಾಲುಕ್ಯ ಬಸವರಾಜ, ಮೋಹನ ಮಂಡಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net