

ಚಿತ್ರದುರ್ಗ: ಹೊಸದಿಲ್ಲಿ ವಿಧಾನಸಭಾ ಚುನಾವಣೆ ಎಫೆಕ್ಟ್ ನಮ್ಮ ರಾಜ್ಯದ ಮೇಲಾಗಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಹೇಳಿದರು. ಚಳ್ಳಕೆರೆ ತಾಲೂಕು ರೇಣು ಕಾಪುರದಲ್ಲಿ ಮಂಗಳವಾರ ಮಾತನಾಡಿ,ಇಂಡಿಯಾ ಒಕ್ಕೂಟ ಬಿಟ್ಟು ಪ್ರತ್ಯೇಕವಾಗಿ ಅರವಿಂದಕೇಜ್ರಿವಾಲ್ ಚುನಾವಣೆಗೆ ಹೋಗಿದ್ದರಿಂದ ಹಿನ್ನಡೆಯಾಗಿದೆ. ಕರ್ನಾಟಕದಲ್ಲಿ 135 ಸೀಟು ಕಾಂಗ್ರೆಸ್ ಬಂತಲ್ಲಾ ಆಗ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ಕೊಟ್ಟಿದ್ದರೆ?
ಉದಯಗಿರಿ ಪ್ರಕರಣ ಗೊತ್ತಿಲ್ಲ. ಪೊಲೀಸರು ಕ್ರಮ ಜರುಗಿಸುತ್ತಾರೆ. ಸಿಎಂ ಸಿದ್ದ ರಾಮಯ್ಯ ಯಾರೇ ತಪ್ಪು ಮಾಡಿದ್ದರೂ ಅದನ್ನು ತಪ್ಪೇ ಎಂದು ಹೇಳು ವಂಥವರು.
ರಾಜ್ಯದಲ್ಲಿ ತಾಲಿಬಾನ್ ಸರ್ಕಾರವಿದೆ, ಉದಯಗಿರಿಗೆ ಗಲಾಟೆಗೆ ಸಿಎಂ ಶ್ರೀರಕ್ಷೆ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂಯೇಂದ್ರ ಏನಾದರೂ ಹೇಳಬೇಕೆಂದು ಹೇಳು ತ್ತಾರೆ.ಬಿಜೆಪಿ ಅಧಿಕಾರಾವಧಿ ಗಲಭೆಗಳು ಅಧಿಕವಾಗಿವೆ. ನಮ್ಮದು ಎಲ್ಲರ ಪರವಾಗಿರುವ ಸರ್ಕಾರ.
ಬಸವನೌಡ ಪಾಟೀಲ್ ಯತ್ನಾಳ್, ಅಶೋಕ್,ವಿಜಯೇಂದ್ರ,ರಮೇಶ್ ಜಾರಕಿ ಹೊಳಿ ಅವರ? ಯಾರು ಬಿಜೆಪಿಯ ಯಾರು ನಾಯಕರು? ಭದ್ರಾವತಿ ಶಾಸಕ ಸಂಗಮೇಶ್ವರ ಪುತ್ರ ಮಹಿಳಾ ಅಧಿಕಾರಿಗೆ ಬೆದರಿಸಿದ ಪ್ರಕರಣ ಕುರಿತು ಪ್ರತಿ ಕ್ರಿಯಿಸಿ,ಯಾರೇ ತಪ್ಪು ಮಾಡಿದರೂ ತಪ್ಪೇ ಎಂದರು.
---