ಹೊಸದಾಗಿ ಕನ್ನಡ ಫಿಲಂ ಚೇಂಬರ್ ಸ್ಥಾಪನೆ

11 ckm 6 ravindra
ಚೇಂಬರ್ ರಾಜ್ಯಾಧ್ಯಕ್ಷ ಎಂ.ಎಸ್.ರವೀAದ್ರ
Published on

ಚಿಕ್ಕಮಗಳೂರು: ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಹೊಸಕಲಾವಿದರು ಹಾಗೂ ಹಿರಿಯ ಕಲಾವಿದರ ಜೊತೆಗೂಡಿ ಹೊಸದಾಗಿ ಕನ್ನಡ ಫಿಲಂ ಚೇಂಬರ್ ಸ್ಥಾಪಿಸಲಾಗಿದೆ ಎಂದು ಚೇಂಬರ್ ರಾಜ್ಯಾಧ್ಯಕ್ಷ ಎಂ.ಎಸ್.ರವೀAದ್ರ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಫಿಲಂ ಚೇಂಬರ್ ಸ್ಥಾಪನೆಗೊಂಡು ಒಂದು ವರ್ಷವಾಗಿದೆ. ೭೫೦ ಸದಸ್ಯರನ್ನು ಹೊಂದಿದ್ದು, ೬೦ ಮಂದಿ ಕಲಾವಿದರಿದ್ದಾರೆ. ಅವರುಗಳಿಗೆ ಅಜೀವ ಸದಸ್ಯತ್ವ ನೀಡಲಾಗಿದೆ. ೨೫೦ ಉತ್ತಮ ಕಲಾವಿದರನ್ನು ಗುರುತಿಸಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನ ಸಮಾರಂಭವನ್ನು ಆಯೋಜಿಸಿ ಗೌರವಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿನಿಮಾಗೆ ಸಂಬAಧಪಟ್ಟ ಕಲಾವಿದರು, ನಿರ್ದೇಶಕರು, ಕ್ಯಾಮೆರಾಮನ್, ಸಂಗೀತ ನಿರ್ದೇಶಕರು, ನೃತ್ಯ ನಿರ್ದೇಶಕರು, ಫೈಟ್‌ಮಾಸ್ಟರ್ ಸೇರಿದಂತೆ ಎಲ್ಲ ವಿಭಾಗದವರಿಂದ ೨ ಸಾವಿರ ರೂ. ಪಡೆದು ಅಜೀವ ಸದಸ್ಯತ್ವ ನೀಡಿ, ಗುರುತಿನ ಚೀಟಿಯನ್ನು ನೀಡಲಾಗಿದೆ ಎಂದು ವಿವರಿಸಿದರು.

ನಿರ್ಮಾಪಕರು ಮೂವಿ ಬ್ಯಾನರ್ ಅಜೀವ ಸದಸ್ಯತ್ವ ೫ ಸಾವಿರ, ಮೂವಿ ಟೈಟಲ್ ೫೦೦ ರೂ. ಇದೆ. ನೋಂದಣಿ ಮಾಡಿರುವ ಸದಸ್ಯರು ಕನ್ನಡ ಫಿಲಂ ಚೇಂಬರ್ ಚುನಾವಣೆಯಲ್ಲಿ ಭಾಗವಹಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದ್ದು, ಈಗಾಗಲೇ ರಾಜ್ಯದ ೧೭ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಫಿಲಂ ಚೇಂಬರ್ ಧ್ಯೇಯೋದ್ಧೇಶಗಳನ್ನು ತಿಳಿಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಫಿಲಂ ಚೇಂಬರ್ ಹೊಸಪೇಟೆ ಜಿಲ್ಲಾಧ್ಯಕ್ಷ ಕೆ.ಎಂ.ಶಿವಶAಕರಯ್ಯ, ಬಳ್ಳಾರಿಯ ಹನುಮಂತರೆಡ್ಡಿ, ವಿಜಯಪುರ ಜಿಲ್ಲಾ ಉಪಾಧ್ಯಕ್ಷೆ ಪರಿಮಳ, ಕಾರ್ಯಕಾರಿ ಸಮಿತಿ ಸದಸ್ಯೆ ವರಮಹಾಲಕ್ಷ್ಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net