

ಬೇಲೂರು: ಕೆಲ ದಿನಗಳ ಹಿಂದೆ ನಮ್ಮ ದೇಶದ ವಿಜ್ಞಾನಿಗಳು ದೊಡ್ಡ ಮೈಲಿಗಲ್ಲನ್ನು ಸಾಧಿಸುವ ಮೂಲಕ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವದೊಂದಿಗೆ ಹೊಸದನ್ನು ಸಾಧಿಸಲು ಮುಂದಾಗಬೇಕು ಎಂದು ಕ್ಷೇತ್ರ ವಿಜ್ಞಾನ ವಿಭಾಗದ ನೋಡಲ್ ಅಧಿಕಾರಿ ಗೋಪಾಲ್ ಹೇಳಿದರು.
ಬೇಲೂರು ಪಟ್ಟಣದ ದಿವ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ದಿವ್ಯ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಜ್ಞಾನ ವಿಚಾರ ಗೋಷ್ಠಿ ಹಾಗೂ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಭಾವ ಬುದ್ಧಿ, ವಿವೇಖ, ವೈಚಾರಿಕತೆ ನಮ್ಮ ಜೀವನದ ಅವಿಭಾಜ್ಯ ಅಂಗ. ವಿದ್ಯಾರ್ಥಿಗಳು ಯಾವುದೇ ಕೆಲಸ ಮಾಡಬೇಕಾದರೂ ಪ್ರಶ್ನಿಸಿ ಮುಂದೆ ಸಾಗಿದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಅಲ್ಲದೆ ನಮ್ಮ ದೇಶದ ವಿಜ್ಞಾನಿಗಳು ತಡವಾಗಿಯಾದರೂ ಕೆಲ ದಿನಗಳ ಹಿಂದೆ ಚಂದ್ರಯಾನವನ್ನು ಯಶಸ್ವಿಯಾಗಿಸಿ ದೆಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಆದ್ದರಿಂದ ವಿದ್ಯರ್ಥಿಗಳಾದ ನೀವುಗಳು ವಿಜ್ಞಾನ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು, ವಿಜ್ಞಾನದ ವಿಚಾರಗಳನ್ನು ನಾಟಕ ಪ್ರಾತ್ಯಕ್ಷಿಕೆ ಮೂಲಕ ತಿಳಿದು, ಅಧ್ಯಯನ ಶೀಲರಾಗಿ ದೇಶದ ಉತ್ತಮ ಪ್ರಜೆಯಾಗಿ ದೇಶಕ್ಕೆ ಕೊಡುಗೆ ನೀಡುವ ಮೂಲಕ ತಂದೆ ತಾಯಿ, ಗುರುಗಳು, ತನ್ನ ಹುಟ್ಟೂರಿಗೆ ಗೌರವ ತಂದು ಕೀರ್ತಿವಂತ್ತರಾಗಬೇಕು ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್, ತೀರ್ಪುಗಾರರಾದ ಯೋಗೇಶ್‌ಗೌಡ, ಮಂಜುಳ, ಅನೀತಾ, ದಿವ್ಯ ಪ್ರೌಢಶಾಲೆ ಮುಖ್ಯ ಶಿಕ್ಷಕ ಚೇತನ್, ಹಿರಿಯ ಪ್ರಾಥಾಮಿಕ ಸಾಲೆ ಮುಖ್ಯ ಶಿಕ್ಷಕ ಉಮೇಶ್, ಶಿಕ್ಷಕಿ ಜ್ಯೋತಿ ಸೇರಿದಂತೆ ಇತರರಿದ್ದರು.